‘ಮಜಾ ಟಾಕೀಸ್​​’ನಲ್ಲಿ ದೇವರಾಜ್ ಫ್ಯಾಮಿಲಿ; ಪತ್ನಿಗೂ ಗೊತ್ತಿಲ್ಲದ ವಿಚಾರ ರಿವೀಲ್

Updated on: Feb 26, 2025 | 11:01 AM

‘ಮಜಾ ಟಾಕೀಸ್’ ಶೋನಲ್ಲಿ ಹಲವು ಸೆಲೆಬ್ರಿಟಿಗಳು ಬರುತ್ತಾರೆ. ಈ ವೇಳೆ ಅನೇಕ ವಿಚಾರಗಳನ್ನು ದೇವರಾಜ್ ಅವರು ರಿವೀಲ್ ಮಾಡಿದ್ದಾರೆ. ಈ ವಿಚಾರಗಳನ್ನು ಕೇಳಿ ಸ್ವತಃ ಅವರ ಪತ್ನಿ ಕೂಡ ಶಾಕ್​ಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಹೇಳಿದ್ದು ಏನು ಎಂಬುದರ ವಿಡಿಯೋ ಇಲ್ಲಿದೆ.

‘ಮಜಾ ಟಾಕೀಸ್​​’ನಲ್ಲಿ ಈ ಬಾರಿ ದೇವರಾಜ್​ ಫ್ಯಾಮಿಲಿಯ ಆಗಮನ ಆಗಿದೆ. ದೇವರಾಜ್ ಅವರ ನಟನಾ ಅನುಭವ ಸಾಕಷ್ಟಿದೆ. ಹೀಗಾಗಿ, ಚಿತ್ರರಂಗದಲ್ಲಿ ಕಳೆದಾಗ ಆದ ಅನುಭವಗಳನ್ನು ದೇವರಾಜ್​ ಅವರು ಹಂಚಿಕೊಂಡಿದ್ದಾರೆ. ಕೆಲವು ವಿಚಾರಗಳು ಪತ್ನಿಗೇ ಗೊತ್ತಿರಲಿಲ್ಲ. ಈ ವಿಚಾರವನ್ನು ಕೇಳಿ ದೇವರಾಜ್ ಪತ್ನಿ ಚಂದ್ರಲೇಖಾ ಶಾಕ್​ಗೆ ಒಳಗಾದರು. ಈ ಎಪಿಸೋಡ್​ ಈ ವೀಕೆಂಡ್​ನಲ್ಲಿ ಪ್ರಸಾರ ಕಾಣಲಿದೆ. ಕುರಿ ಪ್ರತಾಪ್ ಹಾಗೂ ಇತರರು ಎಲ್ಲರನ್ನೂ ರಂಜಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 26, 2025 10:39 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More