17 ದಿನ ಕಳೆದರೂ ಕರಗದ ವೀರಾಂಜನೇಯ ಸ್ವಾಮಿಗೆ ಅಲಂಕರಿಸಿದ ಬೆಣ್ಣೆ; ಈ ಪವಾಡ ಕಣ್ತುಂಬಿಕೊಳ್ಳಲು ಹರಿದುಬರುತ್ತಿರುವ ಭಕ್ತಸಾಗರ
ಸಾಮಾನ್ಯವಾಗಿ 2-3 ಗಂಟೆಗಳಲ್ಲಿ ಕರಗಬೇಕಾದ ಬೆಣ್ಣೆಯು ಧಾರವಾಡದ ವೀರಾಂಜನೇಯ ದೇವಸ್ಥಾನದಲ್ಲಿ 17 ದಿನಗಳಾದರೂ ಕರಗಿಲ್ಲ. ಅಕ್ಟೋಬರ್ 31 ರಂದು ಆಂಜನೇಯನಿಗೆ ಬೆಣ್ಣೆ ಮತ್ತು ಡ್ರೈ ಫ್ರೂಟ್ ಅಲಂಕಾರ ಮಾಡಲಾಗಿತ್ತು. ಇದು ಆಂಜನೇಯನ ಪವಾಡ ಎಂದು ಭಕ್ತರು ನಂಬಿದ್ದಾರೆ. ಇದೀಗ ವಿಚಾರವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ, ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ
ಧಾರವಾಡ, ನ.17: ಸಾಮಾನ್ಯವಾಗಿ 2 ರಿಂದ 3 ಗಂಟೆಗಳಲ್ಲಿ ಕರಗಿ ಹೋಗಬೇಕಾದ ಬೆಣ್ಣೆಯು ಧಾರವಾಡದ ಸಾಯಿ ನಗರದ ಕೃಷಿ ನಗರದಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ 17 ದಿನಗಳಾದರೂ ಇನ್ನೂ ಕರಗಿಲ್ಲ. ಭಕ್ತರಲ್ಲಿ ಅಚ್ಚರಿ ಮೂಡಿಸಿರುವ ಈ ಘಟನೆ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಅಕ್ಟೋಬರ್ 31 ರಂದು ವೀರಾ೦ಜನೇಯ ಸ್ವಾಮಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಈ ಅಲಂಕಾರದಲ್ಲಿ ಬೆಣ್ಣೆ ಮತ್ತು ವಿವಿಧ ಡ್ರೈ ಫ್ರೂಟ್ಗಳನ್ನು ಬಳಸಲಾಗಿತ್ತು. ಆ ದಿನದಿಂದ ಇಂದಿನವರೆಗೆ 17 ದಿನಗಳು ಕಳೆದಿದ್ದರೂ, ಆಂಜನೇಯನ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆಯು ಯಾವುದೇ ಬದಲಾವಣೆ ಇಲ್ಲದೆ ಹಾಗೆಯೇ ಉಳಿದಿದೆ. ಇದು ದೇವರ ಪವಾಡ ಎಂದು ಭಕ್ತರು ನಂಬಿದ್ದಾರೆ. ಇಂತಹ ಘಟನೆಗಳು ವಿರಳವಾಗಿದ್ದು, ಭಕ್ತರು ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಘಟನೆಯು ದೈವಿಕ ಶಕ್ತಿಯ ಪ್ರತೀಕ ಎಂದು ಸ್ಥಳೀಯರು ಭಾವಿಸಿದ್ದಾರೆ. ಬೆಣ್ಣೆ ಕರಗದೇ ಇರುವುದು ದೇವಸ್ಥಾನದ ಇತಿಹಾಸದಲ್ಲಿ ಒಂದು ವಿಶಿಷ್ಟ ಘಟನೆಯಾಗಿ ದಾಖಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
