ಅಭಿಮಾನಿಗಳಿಂದ ಧ್ರುವ ಸರ್ಜಾಗೆ ಹೂಮಳೆ, ಸ್ಟೆಪ್ ಹಾಕಿದ ಧ್ರುವ
Martin Movie: ‘ಮಾರ್ಟಿನ್’ ಸಿನಿಮಾ ಬಿಡುಗಡೆ ಆಗಿದ್ದ ನರ್ತಕಿ ಚಿತ್ರಮಂದಿರಕ್ಕೆ ಬಂದ ಧ್ರುವ ಸರ್ಜಾ ಮೇಲೆ ಅಭಿಮಾನಿಗಳು ಹೂಮಳೆ ಸುರಿಸಿದರು. ಈ ವೇಳೆ ಧ್ರುವ, ಅಭಿಮಾನಿಗಳಿಗಾಗಿ ಹೆಜ್ಜೆ ಹಾಕಿದರು.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಇಂದು (ಅಕ್ಟೋಬರ್ 11) ಬಿಡುಗಡೆ ಆಗಿದೆ. ಮೂರು ವರ್ಷಗಳ ಬಳಿಕ ಧ್ರುವ ಅವರ ಸಿನಿಮಾ ಒಂದು ಚಿತ್ರಮಂದಿರದಲ್ಲಿ ತೆರೆಗೆ ಬರುತ್ತಿದೆ. ‘ಮಾರ್ಟಿನ್’ ಸಿನಿಮಾ ಬಗ್ಗೆ ಧ್ರುವ ಸರ್ಜಾಗೆ ಬಹಳ ದೊಡ್ಡ ನಿರೀಕ್ಷೆ ಇದೆ. ಸಿನಿಮಾ ಬಿಡುಗಡೆ ಆದ ಬೆನ್ನಲ್ಲೆ ಧ್ರುವ ಸರ್ಜಾ ಇಂದು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಗಾಂಧಿ ನಗರದ ಮುಖ್ಯ ಚಿತ್ರಮಂದಿರ ನರ್ತಕಿಗೆ ಧ್ರುವ ಸರ್ಜಾ ಬಂದಾಗ ಅಭಮಾನಿಗಳು ಹೂಗಳ ಸುರಿಮಳೆಯನ್ನೇ ಧ್ರುವ ಕಾರಿನ ಮೇಲೆ ಮಾಡಿದರು. ಬಳಿಕ ಕಾರಿನ ಮೇಲೆ ಹತ್ತಿದ ನಟ ಧ್ರುವ ಸರ್ಜಾ, ಅಭಿಮಾನಿಗಳಿಗೆ ಕೈಮುಗಿದಿದ್ದಲ್ಲದೆ, ಅಭಿಮಾನಿಗಳಿಗಾಗಿ ಹೆಜ್ಜೆ ಹಾಕಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 11, 2024 01:30 PM