ಅಣ್ಣನ ಸಮಾಧಿ ಮೇಲೆ ಮಲಗಿ ಮಗಳ ಜೊತೆ ಆಟವಾಡಿದ ಧ್ರುವ ಸರ್ಜಾ

Updated on: Sep 13, 2023 | 8:30 AM

ಧ್ರುವ ಸರ್ಜಾ ಫಾರ್ಮ್​ಹೌಸ್​ನಲ್ಲಿ ಚಿರು ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲಿ ಸಮಾಧಿ ಕೂಡ ಕಟ್ಟಲಾಗಿದೆ. ಈಗ ಈ ಸಮಾಧಿ ಮೇಲೆ ಮಲಗಿ ಮಗಳ ಜೊತೆ ಆಟ ಆಡುತ್ತಿರುವ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದೆ. ಈ ಮೊದಲು ಅವರು ಅಣ್ಣನ ಸಮಾಧಿ ಪಕ್ಕ ನಿದ್ರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

ನಟ ಧ್ರುವ ಸರ್ಜಾ ಹಾಗೂ ಸಹೋದರ ಚಿರಂಜೀವಿ ಸರ್ಜಾ (Chiranjeevi Sarja) ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದರು. ಈ ನೋವು ಧ್ರುವ ಅವರಿಂದ ಎಂದಿಗೂ ದೂರ ಆಗುವಂಥದ್ದಲ್ಲ. ಧ್ರುವ ಸರ್ಜಾ ಫಾರ್ಮ್​ಹೌಸ್​ನಲ್ಲಿ ಚಿರು ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅಲ್ಲಿ ಸಮಾಧಿ ಕೂಡ ಕಟ್ಟಲಾಗಿದೆ. ಈಗ ಈ ಸಮಾಧಿ ಮೇಲೆ ಮಲಗಿ ಮಗಳ ಜೊತೆ ಆಟ ಆಡುತ್ತಿರುವ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದೆ. ಈ ಮೊದಲು ಅವರು ಅಣ್ಣನ ಸಮಾಧಿ ಪಕ್ಕ ನಿದ್ರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಚಿರು ಬಗ್ಗೆ ಧ್ರುವಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ಇದು ತೋರಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More