ಇವು ವಜ್ರಗಳಾ, ಜಸ್ಟ್​​ ಬಣ್ಣದ ಕಲ್ಲುಗಳಾ? ಕರ್ನೂಲು ಜಿಲ್ಲೆಯ ರೈತರು ಹೊಲಗಳಲ್ಲಿ ವಜ್ರದ ಬೇಟೆಯಲ್ಲಿ ಬೆವರು ಸುರಿಸುತ್ತಿದ್ದಾರೆ!  

Updated on: Jul 21, 2023 | 11:20 AM

ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿ ವಜ್ರ ಬೇಟೆಯಲ್ಲಿ ತೊಡಗಿದ್ದಾರೆ. ಆದರೆ, ಸಿಕ್ಕ ವಜ್ರಗಳು ನಿಜವೋ ಅಲ್ಲವೋ ಎಂಬ ಅನುಮಾನ ಅವರಲ್ಲಿ ಮೂಡಿದೆ. ಹಾಗಾಗಿ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ವಜ್ರ ಅಳತೆ ಮೀಟರ್ ಖರೀದಿಸಿದ್ದಾರೆ.

ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಕರ್ನೂಲು ಜಿಲ್ಲೆಯ ರೈತರು, ಜನ ಸಾಮಾನ್ಯರು ಹೊಲಗಳಿಗೆ ನುಗ್ಗುತ್ತಾರೆ. ಬೆಳೆಗಳನ್ನು ಬೆಳೆಯಲು ಅಲ್ಲ, ಆದರೆ ವಜ್ರಗಳನ್ನು ಬೇಟೆಯಾಡಲು! ಅಲ್ಲಿ ಮಳೆಯಾದರೆ ವಜ್ರಗಳು ಸಿಗುತ್ತವಂತೆ. ಅದಕ್ಕಾಗಿಯೇ ರೈತರು ಹೊಲಗಳಲ್ಲಿ ವಜ್ರಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಇದೀಗ ಈ ವಜ್ರದ ಬೇಟೆ ಗುಂಟೂರಿಗೂ ಹಬ್ಬಿದೆ. ಹೌದು, ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿ ಬಸವಮ್ಮ ವಾಗುವಿನಲ್ಲಿ ವಜ್ರಗಳು ಪತ್ತೆಯಾಗಿವೆ ಎಂಬ ಪ್ರಚಾರ ಗರಿಗೆದರುತ್ತಿದೆ. ಅದರೊಂದಿಗೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿ ವಜ್ರ ಬೇಟೆಯಲ್ಲಿ ತೊಡಗಿದ್ದಾರೆ. ಆದರೆ, ಸಿಕ್ಕ ವಜ್ರಗಳು ನಿಜವೋ ಅಲ್ಲವೋ ಎಂಬ ಅನುಮಾನ ಅವರಲ್ಲಿ ಮೂಡಿದೆ. ಹಾಗಾಗಿ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ವಜ್ರ ಅಳತೆ ಮೀಟರ್ ಖರೀದಿಸಿದ್ದಾರೆ. ಅದನ್ನು ತೆಗೆದುಕೊಂಡು ಬಸವಮ್ಮ ವಾಗುವಿಗೆ ಬಂದಿದ್ದಾರೆ. ಅಲ್ಲಿ ದೊರೆತ ಕಲ್ಲನ್ನು ಮೀಟರ್ ಗೆ ಹಾಕಿದಾಗ ಬಿಂದುಗಳ ರೂಪದಲ್ಲಿ ಕಲ್ಲಿನ ಗುಣಮಟ್ಟ ತೋರಿಸುತ್ತಿದೆ!

 

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More