Mandya: ಪ್ರಜಾಧ್ವನಿ ಯಾತ್ರೆ ಸಭೆಯಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ ವ್ಯಕ್ತಿಗೆ ಎದ್ಹೋಗ್ ಇಲ್ಲಿಂದ ಅಂತ ಗದರಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Mar 13, 2023 | 6:25 PM

ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಶಿವಕುಮಾರ ಭಾಷಣ ಮಾಡುವಾಗ ಸಭಿಕರಲ್ಲಿ ಒಬ್ಬ ವ್ಯಕ್ತಿ ಸುಖಾಸುಮ್ಮನೆ ಕಾಂಗ್ರೆಸ್ ಗೆ ಜೈ ಶಿವಕುಮಾರ್​ಗೆ ಜೈ ಅಂತ ಕೂಗುತ್ತಿದ್ದ.

ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗಾಗ ಸಾರ್ವಜನಿಕವಾಗಿಯೂ ಕೋಪ ಮಾಡಿಕೊಳ್ಳುತ್ತಾರೆ. ಅಂಥದೊಂದು ಪ್ರಸಂಗ ಇಂದು ಮಂಡ್ಯದಲ್ಲಿ (Mandya) ನಡೆಯಿತು. ಪ್ರಜಾಧ್ವನಿ ಯಾತ್ರೆಯ (Prajadhavni Yatre) ಭಾಗವಾಗಿ ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಶಿವಕುಮಾರ ಭಾಷಣ ಮಾಡುವಾಗ ಸಭಿಕರಲ್ಲಿ ಒಬ್ಬ ವ್ಯಕ್ತಿ ಸುಖಾಸುಮ್ಮನೆ ಕಾಂಗ್ರೆಸ್ ಗೆ ಜೈ ಶಿವಕುಮಾರ ಜೈ ಅಂತ ಕೂಗುತ್ತಿದ್ದ. ಪ್ರಾಯಶಃ ಕುಡಿದಿದ್ದ (drunk) ಅನಿಸುತ್ತದೆ. ಅವನ ಕೂಗಿನಿಂದ ಸಿಡಿಮಿಡಿಗೊಳ್ಳುವ ಶಿವಕುಮಾರ, ‘ಏಯ್ ಮಧ್ಯಾಹ್ನದ ಹೊತ್ತಲ್ಲೇ ಎಣ್ಣೆ ಹಾಕ್ಕೊಂಡ್ ಬಂದಿದಿಯಾ? ಕುಡ್ದಿರೋನ್ ನೀನೊಬ್ನೇ ಅಲ್ಲ, ಬಾಯ್ಮುಚ್ಚಿಕೊಂಡು ಭಾಷಣ ಕೇಳುವ ಹಾಗಿದ್ದರೆ ಕೂತ್ಕೋ ಇಲ್ಲಾಂದ್ರೆ ಎದ್ ಹೋಗ್ ಇಲ್ಲಿಂದ,’ ಅಂತ ಗದರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.