DK Shivakumar: ದೆಹಲಿ ವಿಮಾನ ನಿಲ್ದಾಣದಲ್ಲಿ ಜಮೀರ್ ಅಹ್ಮದ್ ಓಡಿಬಂದು ವಿಶ್ ಮಾಡಿದಾಗಲೇ ಮುಗುಮ್ಮಾಗಿ ಕೂತಿದ್ದ ಶಿವಕುಮಾರ್​ ಮುಗುಳ್ನಕ್ಕಿದ್ದು!

ಅರುಣ್​ ಕುಮಾರ್​ ಬೆಳ್ಳಿ

Updated on: May 18, 2023 | 4:05 PM

ಜಮೀರ್ ರನ್ನು ನೋಡಿದ ಬಳಿಕ ಶಿವಕುಮಾ​ರ್ ಜೊತೆ ಮಾತಾಡುತ್ತಿದ್ದ ವ್ಯಕ್ತಿ ಅಲ್ಲಿಂದ ಎದ್ದು ಹೋಗುತ್ತಾರೆ.

ದೆಹಲಿ: ರಾಜ್ಯದ ಮುಖ್ಯಮಂತ್ರಿಯನ್ನು ಹೈಕಮಾಂಡ್ ಅಯ್ಕೆ ಮಾಡಿದ ಬಳಿಕ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಬಣಗಳ ನಡುವೆ ತಾತ್ಕಾಲಿಕವಾಗಿ ತಲೆದೋರಿದ್ದ  ವೈಮನಸ್ಸು ತಿಳಿಯಾದಂತಿದೆ. ಆದರೆ, ಶಿವಕುಮಾರ್ ಮುಖದಲ್ಲಿ ಈಗಲೂ ನಿರಾಶೆಯ ಛಾಯೆಯನ್ನು ಗುರುತಿಸಬಹುದು. ದೆಹಲಿ ಏರ್ಪೋಟ್ ನಲ್ಲಿ (Delhi airport) ಕುಳಿತು ಬೆಂಗಳೂರಿಗೆ ಹೊರಡುವ ವಿಮಾನಕ್ಕಾಗಿ ಕಾಯುತ್ತಿರುವಾಗ ವ್ಯಕ್ತಿಯೊಬ್ಬರು ಅವರ ಹತ್ತಿರ ಕುಳಿತು ಗಂಭೀರವಾಗಿ ಏನನ್ನೋ ಹೇಳುತ್ತಿದ್ದಾರೆ. ಅದರೆ, ಶಿವಕುಮಾರ್ ಆ ವ್ಯಕ್ತಿ ಹೇಳುವುದನ್ನು ಅನ್ಯಮನಸ್ಕತೆಯಿಂದ ಕೇಳಿಸಿಕೊಳ್ಳುತ್ತಿದ್ದಾರೆ. ಅಷ್ಟರಲ್ಲಿ ಚಾಮರಾಜಪೇಟೆಯಿಂದ ವಿಧಾನ ಸಭೆಗೆ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಅಲ್ಲಿಗೆ ನಗುತ್ತಾ ಬಂದು ಶಿವಕುಮಾರ್ ಗೆ ವಿಶ್ ಮಾಡಿದಾಗ ಮಾತ್ರ ಮುಗಳ್ನಕ್ಕು ಪ್ರತಿವಿಶ್ ಮಾಡುತ್ತಾರೆ. ಜಮೀರ್ ರನ್ನು ನೋಡಿದ ಬಳಿಕ ಶಿವಕುಮಾ​ರ್ ಜೊತೆ ಮಾತಾಡುತ್ತಿದ್ದ ವ್ಯಕ್ತಿ ಅಲ್ಲಿಂದ ಎದ್ದು ಹೋಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.