ವರಮಹಾಲಕ್ಷ್ಮಿ ಹಬ್ಬದ ಪೂಜಾ ಸಮಯ ಹಾಗೂ ಬಾಗಿನ ಕೊಡುವುದರ ಉದ್ದೇಶ ತಿಳಿಯಿರಿ

Updated on: Aug 08, 2025 | 7:05 AM

ಡಾ. ಬಸವರಾಜ್ ಗುರೂಜಿ ಅವರು ವರಮಹಾಲಕ್ಷ್ಮೀ ಹಬ್ಬದ ಪೂಜಾ ವಿಧಾನ ಮತ್ತು ಶುಭ ಸಮಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಗಿನದಲ್ಲಿ 16 ವಿಧದ ಸುಮಂಗಲಿ ಪ್ರತೀಕಗಳನ್ನು ಇಡುವುದು ಮತ್ತು ಸಿಂಹ, ವೃಶ್ಚಿಕ, ಕುಂಭ ಲಗ್ನಗಳಲ್ಲಿ ಪೂಜೆ ಮಾಡುವುದು ಶುಭ. ಅಷ್ಟಮಹಾಲಕ್ಷ್ಮಿಯರ ಪೂಜೆಯ ಮಹತ್ವವನ್ನು ಸಹ ಅವರು ವಿವರಿಸಿದ್ದಾರೆ.

ಬೆಂಗಳೂರು, ಆಗಸ್ಟ್​ 08: ವರಮಹಾಲಕ್ಷ್ಮೀ ಹಬ್ಬವು ಅಷ್ಟ ಮಹಾಲಕ್ಷ್ಮಿಯರ ಏಕರೂಪ ಆಚರಣೆಯಾಗಿದೆ. ಡಾ. ಬಸವರಾಜ್ ಗುರೂಜಿ ಅವರು ಈ ಹಬ್ಬದ ಪೂಜಾ ವಿಧಾನ ಮತ್ತು ಶುಭ ಸಮಯಗಳ ಬಗ್ಗೆ ವಿವರಿಸಿದ್ದಾರೆ. ಈ ಪೂಜೆಯಲ್ಲಿ ಬಾಗಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಬಾಗಿನದಲ್ಲಿ ಅರಿಶಿನ, ಕುಂಕುಮ, ಕನ್ನಡಿ, ಬಾಚಣಿಗೆ ಮುಂತಾದ 16 ವಿಧದ ವಸ್ತುಗಳನ್ನು ಇಡಬೇಕು. ಇವು ಸುಮಂಗಲಿಯ ಪ್ರತೀಕಗಳಾಗಿವೆ.

Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More