Daily Horoscope: ಸೂರ್ಯ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚಾರ

Updated on: Oct 23, 2025 | 6:34 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಅಕ್ಟೋಬರ್ 23ರ ದೈನಂದಿನ ರಾಶಿ ಭವಿಷ್ಯವನ್ನು ನೀಡಿದ್ದಾರೆ. ವಿಶಾಖ ನಕ್ಷತ್ರದಲ್ಲಿ ಚಂದ್ರನ ಸಂಚಾರ, ಭಾವ ಬಿದಿಗೆಯ ಮಹತ್ವ, ಹಾಗೂ ಪ್ರತಿ ರಾಶಿಯವರ ಆರ್ಥಿಕ, ಆರೋಗ್ಯ, ಉದ್ಯೋಗ, ವೈವಾಹಿಕ ಜೀವನ, ಅದೃಷ್ಟ ಸಂಖ್ಯೆ ಮತ್ತು ಬಣ್ಣಗಳ ಕುರಿತು ಸಮಗ್ರ ಮಾಹಿತಿ ವಿಡಿಯೋದಲ್ಲಿ ನೀಡಲಾಗಿದೆ.

ಬೆಂಗಳೂರು, ಅಕ್ಟೋಬರ್​​ 23: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಅಕ್ಟೋಬರ್ 23, ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇಂದು ವಿಶ್ವಾವಸು ಸಂವತ್ಸರದ, ದಕ್ಷಿಣಾಯನ ಕಾರ್ತಿಕ ಮಾಸದ, ಶರದ್ ಋತುವಿನ ಶುಕ್ಲ ಪಕ್ಷದ ಬಿದಿಗೆಯಾಗಿದ್ದು, ವಿಶಾಖ ನಕ್ಷತ್ರ, ಆಯುಷ್ಮಾನ್ ಯೋಗ, ಬಾಲವ ಕರಣ ಇರುತ್ತದೆ. ರಾಹುಕಾಲ ಮಧ್ಯಾಹ್ನ 1:31 ರಿಂದ 3:00 ರವರೆಗೆ ಇರುತ್ತದೆ, ಆದರೆ ಸರ್ವಸಿದ್ಧಿ, ಸಂಕಲ್ಪ, ಶುಭಕಾಲವು ಮಧ್ಯಾಹ್ನ 12:04 ರಿಂದ 1:30 ರವರೆಗೆ ಇರುತ್ತದೆ. ಸೂರ್ಯನು ತುಲಾ ರಾಶಿಯಲ್ಲಿದ್ದು, ಚಂದ್ರನೂ ಸಹ ತುಲಾ ರಾಶಿಯಲ್ಲಿ ಸಂಚರಿಸುತ್ತಾನೆ.

Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More