Horoscope Today 03 January: ಈ ರಾಶಿಯವರ ಅದೃಷ್ಟದ ಬಣ್ಣ, ಸಂಖ್ಯೆ ಯಾವುದು?

Updated on: Jan 03, 2026 | 6:48 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ ದಿನ ಭವಿಷ್ಯವನ್ನು ಹೇಗಿದೆ ಎಂಬುದನ್ನು ಹೇಳಿದ್ದಾರೆ. ಈ ಪುಷ್ಯ ಹುಣ್ಣಿಮೆಯ ದಿನದಂದು ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗೆ ಗ್ರಹಗತಿಗಳ ಆಧಾರದ ಮೇಲೆ ಆರ್ಥಿಕ, ಕೌಟುಂಬಿಕ, ವೃತ್ತಿ ಜೀವನದಲ್ಲಿನ ಶುಭ-ಅಶುಭ ಫಲಗಳು, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಜ.3: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 3, ಶನಿವಾರದ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನ ವಿಶ್ವಾಸು ನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಇದ್ದು, ಇದನ್ನು ಪುಷ್ಯ ಹುಣ್ಣಿಮೆ ಅಥವಾ ಬನದ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಆರ್ದ್ರಾ ನಕ್ಷತ್ರ, ಬ್ರಹ್ಮಯೋಗ ಮತ್ತು ಬವಕರಣೆಗಳೊಂದಿಗೆ ಈ ದಿನವು ಮಾಘ ಸ್ನಾನದ ಪ್ರಾರಂಭಕ್ಕೂ ಪ್ರಶಸ್ತವಾಗಿದೆ. ಶೃಂಗೇರಿಯಲ್ಲಿ ಆರಿದ್ರೋತ್ಸವ, ಮೂಗೂರಿನಲ್ಲಿ ಉತ್ಸವ ಹಾಗೂ ಬನಶಂಕರಿ ವ್ರತ ಆಚರಣೆಯಂತಹ ವಿಶೇಷ ದಿನ ಇದಾಗಿದೆ. ರವಿ ಧನುಸ್ಸು ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸುವ ಈ ಶುಭ ದಿನದಂದು ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಗುರೂಜಿ ಶುಭ ಕೋರಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ, ವೃತ್ತಿ, ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಕ್ಷಿಪ್ತ ಭವಿಷ್ಯವನ್ನು ನೀಡಿ, ಅದೃಷ್ಟದ ಬಣ್ಣ, ದಿಕ್ಕು, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳನ್ನೂ ಸೂಚಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 03, 2026 06:48 AM