ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲ್ಪಟ್ಟಿರುವ ಸಿಟಿ ರವಿ ಅಧಿಕಾರ ಹಸ್ತಾಂತರಿಸಲು ದೆಹಲಿಗೆ ತೆರಳಿದರು
ದೆಹಲಿಯಲ್ಲಿ ತನಗಿದ್ದ ಜವಾಬ್ದಾರಿ ಮುಗಿದಿದೆ, ಚಾರ್ಜನ್ನು ವಾಪಸ್ಸು ನೀಡಿ ಅಲ್ಲಿರುವ ನಾಯಕರು, ಸಹೋದ್ಯೋಗಿಗಳು, ಮತ್ತು ಸ್ನೇಹಿತರನ್ನು ಭೇಟಿಯಾಗಿ 3-4 ದಿನಗಳ ನಂತರ ರಾಜ್ಯಕ್ಕೆ ಹಿಂತಿರುಗುವುದಾಗಿ ರವಿ ಹೇಳಿದರು.
ದೇವನಹಳ್ಳಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP national general secretary) ಹುದ್ದೆಯಿಂದ ಕೈಬಿಡಲ್ಪಟ್ಟಿರುವ ಮಾಜಿ ಶಾಸಕ ಸಿಟಿ ರವಿ (CT Ravi) ಅಧಿಕಾರ ಹಸ್ತಾಂತರಿಲು ಇಂದು ದೆಹಲಿಗೆ ತೆರಳಿದರು. ಅವರಿಗೆ ರಾಜ್ಯ ಬಿಜೆಪಿ ಘಟಕದ ಜವಾಬ್ದಾರಿವಹಿಸಿ ಕೊಡುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ರವಿ ಭಾರದ ಹೃದಯದೊಂದಿಗೆ ಮಾತಾಡುತ್ತಿರುವಂತೆ ಭಾಸವಾಯಿತು. ದೆಹಲಿಯಲ್ಲಿ ತನಗಿದ್ದ ಜವಾಬ್ದಾರಿ ಮುಗಿದಿದೆ, ಚಾರ್ಜನ್ನು ವಾಪಸ್ಸು ನೀಡಿ ಅಲ್ಲಿರುವ ನಾಯಕರು, ಸಹೋದ್ಯೋಗಿಗಳು, ಮತ್ತು ಸ್ನೇಹಿತರನ್ನು ಭೇಟಿಯಾಗಿ 3-4 ದಿನಗಳ ನಂತರ ರಾಜ್ಯಕ್ಕೆ ಹಿಂತಿರುಗುವುದಾಗಿ ಹೇಳಿದರು. ವಿ ಸೋಮಣ್ಣ (V Somanna) ಸಹ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನ ಮೇಲೆ ಕಣ್ಣಿಟ್ಟಿರುವುದನ್ನು ಅವರ ಗಮನಕ್ಕೆ ತಂದಾಗ, ಪಕ್ಷದ ವರಿಷ್ಠರು ಯಾರನ್ನು ಬೇಕಾದರೂ ಅಧ್ಯಕ್ಷ ಮಾಡಲಿ, ತನಗೇನೂ ಅಭ್ಯಂತರವಿಲ್ಲ ಎಂದು ರವಿ ಹೇಳಿದರು. ರಾಜ್ಯಾಧ್ಯಕ್ಷನ ಅಯ್ಕೆ ಯಾವಾಗ ಆಗಬಹುದು ಅಂತ ಕೇಳಿದ ಪ್ರಶ್ನೆಗೆ ಅವರು ಗೊತ್ತಿಲ್ಲವೆಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ