Hassan: ಬಾಡೂಟಕ್ಕೆ ಮೊದಲು ಗುಂಡು ಹಾಕಿದವರು ಊಟದ ಸ್ಥಳಕ್ಕೆ ಬಂದು ಧೊಪ್ಪನೆ ಬಿದ್ದರು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2023 | 12:23 PM

ಆದರೆ ಎಂಗೂ ಬಾಡೂಟ ಐತೆ, ವಸಿ ಎಣ್ಣೆ ಹೊಡ್ಕೊಂಡ್ ಊಟ ಮಾಡುವ ಅಂದುಕೊಂಡ ಕೆಲವರು ಮದ್ಯದಂಡಿಗೆ ಹೋಗಿ ಕಂಠಮಟ್ಟ ಕುಡಿದುಬಿಟ್ಟಿದ್ದಾರೆ. ಅಲ್ಲಿಂದ ಬಾಡೂಟ ಆಯೋಜಿಸಿದ ಸ್ಥಳದವರೆಗೆ ತೂರಾಡುತ್ತಾ ಬಂದವರು ಅಲ್ಲಿ ತಲುಪುತ್ತಿದ್ದಂತೆಯೇ ನೆಲಕ್ಕುರುಳಿದ್ದಾರೆ!

ಹಾಸನ: ಗುಂಡಿನ ಮತ್ತೇ ಗಮ್ಮತ್ತು… ಅಂತ ಹಳೆಯ ಕನ್ನಡ ಸಿನಿಮಾ ಹಾಡೊಂದಿದೆ, ಆದರೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಗಸರಹಳ್ಳಿ ಬಾರೆಯಲ್ಲಿ ಗುಂಡು ಹಾಕಿದವರೇ ಬೇರೆಯವರಿಗೆ ಗಮ್ಮತ್ತಿನ ವಸ್ತುಗಳಾದರು. ಅಸಲಿಗೆ ಆಗಿದ್ದೇನು ಗೊತ್ತಾ, ಇದು ಎಲೆಕ್ಷನ್ ಟೈಮಲ್ವಾ? ಹಾಸನ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹೆಚ್ ಕೆ ಸುರೇಶ್ (HK Suresh) ಗ್ರಾಮಸ್ಥರಿಗೆ ಬಾಡೂಟ (non veg feast) ಆಯೋಜಿಸಿದ್ದಾರೆ. ಮದ್ಯದ (liquor) ಸರಬರಾಜು ಇದ್ದ ಬಗ್ಗೆ ಖಚಿತ ಮಾಹಿತಿ ಇಲ್ಲ ಮಾರಾಯ್ರೇ. ಆದರೆ ಎಂಗೂ ಬಾಡೂಟ ಐತೆ, ವಸಿ ಎಣ್ಣೆ ಹೊಡ್ಕೊಂಡ್ ಊಟ ಮಾಡುವ ಅಂದುಕೊಂಡ ಕೆಲವರು ಮದ್ಯದಂಡಿಗೆ ಹೋಗಿ ಕಂಠಮಟ್ಟ ಕುಡಿದುಬಿಟ್ಟಿದ್ದಾರೆ. ಅಲ್ಲಿಂದ ಬಾಡೂಟ ಆಯೋಜಿಸಿದ ಸ್ಥಳದವರೆಗೆ ತೂರಾಡುತ್ತಾ ಬಂದವರು ಅಲ್ಲಿ ತಲುಪುತ್ತಿದ್ದಂತೆಯೇ ನೆಲಕ್ಕುರುಳಿದ್ದಾರೆ! ಅವರ ಅವತಾರ ನೀವೇ ನೋಡಿ, ಒಬ್ಬ ವ್ಯಕ್ತಿ ತೂರಾಡುತ್ತಾ ಹೋಗಿತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.