‘ಭೀಮ’ ನೋಡುತ್ತಿದ್ದ ಫ್ಯಾನ್ಸ್​ಗೆ ದುನಿಯಾ ವಿಜಯ್ ಸರ್​ಪ್ರೈಸ್; ಮುಂದೇನಾಯ್ತು ನೋಡಿ

Updated on: Aug 13, 2024 | 8:47 AM

‘ಭೀಮ’ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಯಿತು. ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶಿಸಿರುವ ಸಿನಿಮಾ ಇದು. ಈ ಕಾರಣಕ್ಕೆ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಸಾಕಷ್ಟು ರಾ ಆಗಿ ಸಿನಿಮಾ ಮೂಡಿ ಬಂದಿದೆ ಎಂಬುದು ಹಲವರ ಅಭಿಪ್ರಾಯ.

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಬೆಂಗಳೂರಿನ ಅಂಜನ್ ಥಿಯೇಟರ್​ನಲ್ಲಿ ಈ ಚಿತ್ರವನ್ನು ನೋಡುತ್ತಿದ್ದ ಫ್ಯಾನ್ಸ್​ಗೆ ದುನಿಯಾ ವಿಜಯ್​ ಸರ್​ಪ್ರೈಸ್ ಕೊಟ್ಟಿದ್ದಾರೆ. ಸಿನಿಮಾ ಮುಗಿದ ತಕ್ಷಣ ದುನಿಯಾ ವಿಜಯ್ ಕಾಣಿಸಿಕೊಂಡರು. ಈ ವೇಳೆ ಫ್ಯಾನ್ಸ್ ಕಡೆ ಕೈಬೀಸಿದ್ದಾರೆ. ಅವರನ್ನು ನೋಡಿ ಫಿಧಾ ಆದ ಪ್ರೇಕ್ಷಕರು ಪೋಟೋಗಾಗಿ ಬೆನ್ನುಹತ್ತಿದರು. ಅಷ್ಟೊಂದು ಸಂಖ್ಯೆಯಲ್ಲಿ ಫ್ಯಾನ್ಸ್ ನುಗ್ಗಿದರೆ ಅವರನ್ನು ನಿಯಂತ್ರಿಸೋದು ಕಷ್ಟ ಆಗಬಹುದು ಎಂದು ದುನಿಯಾ ವಿಜಯ್ ಅವರು ಅಲ್ಲಿಂದ ಓಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 13, 2024 08:00 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More