ಅಚಾನಕ್ಕಾಗಿ ಬಾಲ್ಯದ ಗೆಳೆಯನ ಮನೆಗೆ ಭೇಟಿ ಕೊಟ್ಟ ದುನಿಯಾ ವಿಜಯ್
Duniya Vijay: ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿರುವ ನಟ ದುನಿಯಾ ವಿಜಯ್, ತಮ್ಮ ಬಾಲ್ಯದ ಗೆಳೆಯನ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ.
‘ಭೀಮ’ (Bheema) ಸಿನಿಮಾದ ಬಿಡುಗಡೆಗೆ ತಯಾರಾಗಿರುವ ದುನಿಯಾ ವಿಜಯ್ (Duniya Vijay), ಇದರ ನಡುವೆ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ತಮ್ಮ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ಹುಟ್ಟಹಬ್ಬ ಆಚರಿಸಿಕೊಳ್ಳಲಿದ್ದು ಇದಕ್ಕಾಗಿ ತಾವೇ ಮುಂದೆ ನಿಂತು ತಯಾರಿಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಹುಟ್ಟೂರಿಗೆ ಭೇಟಿ ಕೊಟ್ಟಿರುವ ಖುಷಿಯಲ್ಲಿ ಊರಲ್ಲೆಲ್ಲ ಓಡಾಡಿ ಪರಿಚಿತರು, ಬಂಧುಗಳನ್ನು ಭೇಟಿ ಆಗಿದ್ದಾರೆ. ಇದರ ನಡುವೆ ತಮ್ಮ ಬಾಲ್ಯದ ಗೆಳೆಯನ ಮನೆಗೆ ಅಚಾನಕ್ಕಾಗಿ ಭೇಟಿ ನೀಡಿ ಅವರಿಗೆ ಸರ್ಪ್ರೈಸ್ ಸಹ ನೀಡಿದ್ದಾರೆ ವಿಜಿ. ಬಾಲ್ಯದ ಗೆಳೆಯನೊಟ್ಟಿಗೆ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
