DK Shivakumar: ಹುಬ್ಬಳ್ಳಿ ತಲುಪಿದ ಡಿಕೆ ಶಿವಕುಮಾರ್, ಜಗದೀಶ್ ಶೆಟ್ಟರ್ ಮನೆಯಲ್ಲಿ ಸವಿದ ತಿಂಡಿ ಯಾವುದು ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ

Updated on: May 31, 2023 | 12:28 PM

ಸುಸ್ಲಾ ಅಥವಾ ವಗ್ರಾಣಿ ಕಲ್ಯಾಣ ಕರ್ನಾಟಕ ಭಾಗದ ಜನಪ್ರಿಯ ತಿಂಡಿ. ಮಂಡಕ್ಕಿಯನ್ನು ನೀರಲ್ಲಿ ಅದ್ದಿ ತೆಗೆದು ಮಾಡುವ ಸ್ವಾದಿಷ್ಟಕರ ತಿಂಡಿ ವಗ್ರಾಣಿ

ಹುಬ್ಬಳ್ಳಿ: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿಯವರನ್ನು ಭೇಟಿಯಾಗಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಜೊತೆ ಹುಬ್ಬಳ್ಳಿಯಲ್ಲಿರುವ ಜಗದೀಶ್ ಶೆಟ್ಟರ್ (Jagadish Shettar) ಮನೆ ತಲುಲಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕನ ಮನೆಯಲ್ಲಿ ಅವರು ಉಪಹಾರ ಸೇವಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ತಟ್ಟೆಯಲ್ಲಿ ಇಡ್ಲಿ-ವಡಾ ಜೊತೆ ಸುಸ್ಲಾ (Susla) ಕೂಡ ಇದೆ. ಸುಸ್ಲಾ ಅಥವಾ ವಗ್ರಾಣಿ ಕಲ್ಯಾಣ ಕರ್ನಾಟಕ ಭಾಗದ ಜನಪ್ರಿಯ ತಿಂಡಿ. ಮಂಡಕ್ಕಿಯನ್ನು ನೀರಲ್ಲಿ ಅದ್ದಿ ತೆಗೆದು ಮಾಡುವ ಸ್ವಾದಿಷ್ಟಕರ ತಿಂಡಿ ವಗ್ರಾಣಿ! ಶಿವಕುಮಾರ್ ಬಲಭಾಗದಲ್ಲಿ ಅತಿಥೇಯರು ಮತ್ತು ಜಾರಕಿಹೊಳಿ ಕೂತಿದ್ದರೆ ಎಡಕ್ಕೆ ಹೆಬ್ಬಾಳ್ಕರ್ ಕೂತು ತಿಂಡಿ ತಿನ್ನುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 31, 2023 12:23 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.