ಬೆಂಗಳೂರು ಸಿಟಿ ರೌಂಡ್ಸ್ ನಡೆಸಿದ ಡಿಸಿಎಂ: ಯಾವೆಲ್ಲ ಕಾಮಗಾರಿ ವೀಕ್ಷಣೆ?
ಸಿಎಂ ಸಿದ್ದರಾಮಯ್ಯ ಬಳಿಕ ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಲ್ಲಿ ಸಿಟಿ ರೌಂಡ್ಸ್ ನಡೆಸಿದ್ದಾರೆ. ವಿವಿಧ ರಸ್ತೆ ಕಾಮಗಾರಿಗಳನ್ನ ಪರಿಶೀಲಿಸಿದ ಅವರು, ನಾನು ಎಲ್ಲರಿಗೂ ಟಾಸ್ಕ್ ಕೊಟ್ಟಿದ್ದೆ, ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಗುಂಡಿ ಮುಚ್ಚಲು ಅ.30ರವರೆಗೆ ಡೆಡ್ ಲೈನ್ ಕೊಟ್ಟಿದ್ದೇವೆ ಎಂದು ಡಿಸಿಎಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 30: ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ಬೆಂಗಳೂರಲ್ಲಿ ಸಿಟಿ ರೌಂಡ್ಸ್ ನಡೆಸಿದ್ದಾರೆ. ಚಾಲುಕ್ಯ ಸರ್ಕಲ್ನಲ್ಲಿ ರಸ್ತೆ ನಿರ್ಮಾಣ ಮಾಡಿದ ಜಾಗ ಪರಿಶೀಲಿಸಿದ ಡಿಸಿಎಂ, ಅಧಿಕಾರಿಗಳಿಂದ ಕಾಮಗಾರಿ ಕುರಿತು ಮಾಹಿತಿ ಪಡೆದಿದ್ದಾರೆ. ಆ ಬಳಿಕ ಮಿನ್ಸ್ಕ್ ಸ್ಕ್ವೇರ್ ರಸ್ತೆಯನ್ನೂ ಉಪಮುಖ್ಯಮಂತ್ರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ಮಾತನಾಡಿದ ಡಿಕೆಶಿ, ನಾನು ಎಲ್ಲರಿಗೂ ಟಾಸ್ಕ್ ಕೊಟ್ಟಂತೆ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಗುಂಡಿ ಮುಚ್ಚಲು ಅ.30ರವರೆಗೆ ಡೆಡ್ ಲೈನ್ ಕೊಟ್ಟಿದ್ದೇವೆ. ಅದಕ್ಕಾಗಿ ದುಡ್ಡು ಎಷ್ಟು ಬೇಕಿದ್ರೂ ಕೊಡುತ್ತೇವೆಂದು ತಿಳಿಸಲಾಗಿದೆ ಅಂತಲೂ ಡಿಸಿಎಂ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 30, 2025 08:06 PM
Loading...
Unable to load recommendations.
Follow Us
