ಯುವತಿ 20ನೇ ಮಹಡಿಯಿಂದ ಹಾರಬೇಕೆನ್ನುವಷ್ಟರಲ್ಲಿ ಬಂದು ಪ್ರಾಣ ಉಳಿಸಿದ ಆಪದ್ಬಾಂಧವ

Updated on: Apr 20, 2026 | 11:51 AM

ಇಪ್ಪತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದಿದೆ. ಯುವತಿಯೊಬ್ಬಳು ಕಟ್ಟಡದ 20ನೇ ಮಹಡಿಯ ಅತ್ಯಂತ ಕಿರಿದಾದ ಅಂಚಿನಲ್ಲಿ ನೇತಾಡುತ್ತಿದ್ದಳು. ಆಕೆ ಜಿಗಿಯಲು ಸಿದ್ಧವಾದ ಕ್ಷಣದಲ್ಲೇ, ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಮಿಂಚಿನ ವೇಗದಲ್ಲಿ ಆಕೆಯ ಕೂದಲು ಹಿಡಿದಿದ್ದಾನೆ,. ಆಕೆ ಜಾರಿ ಕೆಳಕ್ಕೆ ಬೀಳುತ್ತಿದ್ದಂತೆ ಆ ವ್ಯಕ್ತಿ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಬಳಿಕ ಮತ್ತೋರ್ವ ವ್ಯಕ್ತಿ ಬಂದು ಆಕೆಯನ್ನು ಮೇಲಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಯೋಲ್, ಏಪ್ರಿಲ್ 20: ಇಪ್ಪತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದಿದೆ. ಯುವತಿಯೊಬ್ಬಳು ಕಟ್ಟಡದ 20ನೇ ಮಹಡಿಯ ಅತ್ಯಂತ ಕಿರಿದಾದ ಅಂಚಿನಲ್ಲಿ ನೇತಾಡುತ್ತಿದ್ದಳು. ಆಕೆ ಜಿಗಿಯಲು ಸಿದ್ಧವಾದ ಕ್ಷಣದಲ್ಲೇ, ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಮಿಂಚಿನ ವೇಗದಲ್ಲಿ ಆಕೆಯ ಕೂದಲು ಹಿಡಿದಿದ್ದಾರೆ. ಆಕೆ ಜಾರಿ ಕೆಳಕ್ಕೆ ಬೀಳುತ್ತಿದ್ದಂತೆ ಆ ವ್ಯಕ್ತಿ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಬಳಿಕ ಮತ್ತೋರ್ವ ವ್ಯಕ್ತಿ ಬಂದು ಆಕೆಯನ್ನು ಮೇಲಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಬರೋಬ್ಬರಿ 71 ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು 19 ತುರ್ತು ವಾಹನಗಳು ಧಾವಿಸಿದವು. ಅಕಸ್ಮಾತ್ ಆಕೆ ಮೇಲಿಂದ ಬಿದ್ದರೆ ಪ್ರಾಣ ಉಳಿಸಲು ಕಟ್ಟಡದ ಕೆಳಗೆ ಬೃಹತ್ ‘ಗಾಳಿ ಹಾಸಿಗೆ’ಯನ್ನು (Air Mattress) ಅಳವಡಿಸಲಾಗಿತ್ತು. ಇಡೀ ಪ್ರದೇಶವು ಒಂದು ರೀತಿಯ ಯುದ್ಧಭೂಮಿಯಂತೆ ಮಾರ್ಪಟ್ಟಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More