ಸಫಾರಿ ಜೀಪನ್ನು ಅಟ್ಟಿಸಿಕೊಂಡುಬಂದ ಕಾಡಾನೆ, ರಿವರ್ಸ್​ ಗೇರ್​ನಲ್ಲೇ ಜೀಪ್ ಚಲಾಯಿಸಿದ ಚಾಲಕ: ವಿಡಿಯೋ ವೈರಲ್

Updated on: Jun 04, 2023 | 1:12 PM

ಬಿಳಿಗಿರಿರಂಗನಬೆಟ್ಟದ ಅರಣ್ಯ ವಲಯದಲ್ಲಿ ಆನೆಯೊಂದು ಸಫಾರಿ ಜೀಪ್​ ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಚಾಮರಾಜ‌ಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ವಲಯದಲ್ಲಿ ಸಫಾರಿ ವೇಳೆ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಚಾಮರಾಜನಗರ: ಬಿಳಿಗಿರಿರಂಗನಬೆಟ್ಟದ ಅರಣ್ಯ ವಲಯದಲ್ಲಿ ಆನೆಯೊಂದು ಸಫಾರಿ ಜೀಪ್​ ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಚಾಮರಾಜ‌ಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ವಲಯದಲ್ಲಿ ಸಫಾರಿ ವೇಳೆ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ವಿಚಾರವಾದಿ ಭಗವಾನ್ ಸೇರಿದಂತೆ ಕೆಲವರು ಜೀಪ್​ನಲ್ಲಿ ಸಫಾರಿ ಹೋಗಿದ್ದಾರೆ. ಈ ವೇಳೆ ಮರಿಗಳೊಂದಿಗಿದ್ದ ಆನೆ ಜೀಪ್ ನೋಡಿ​ದಾಳಿ ಮಾಡಲು ಓಡೋಡಿ ಬಂದಿದೆ. ಆನೆ ದಾಳಿಗೆ ಬರುತ್ತಿದ್ದಂತೆಯೇ ತಕ್ಷಣ ಚಾಲಕ ರಿವರ್ಸ್​ ಗೇರ್​ನಲ್ಲೇ ಜೀಪ್​ ಓಡಿಸಿದ್ದಾರೆ. ಅದೃಷ್ಟವಶಾತ್ ಜೀಪ್​ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Published on: Jun 04, 2023 12:59 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More