Video: ಅಹ್ಮದಾಬಾದ್: ರಥಯಾತ್ರೆ ವೇಳೆ ನಿಯಂತ್ರಣ ಕಳೆದುಕೊಂಡು ಓಡಿದ ಆನೆ

Updated on: Jun 27, 2025 | 11:19 AM

ಅಹಮದಾಬಾದ್​ನಲ್ಲಿ ನಡೆದ 148ನೇ ಭಗವಾನ್ ಜಗನ್ನಾಥ ರಥಯಾತ್ರೆ ಮೆರವಣಿಗೆಯಲ್ಲಿ ಆನೆಯೊಂದು ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿರುವ ವಿಡಿಯೋ ವೈರಲ್ ಆಗಿದೆ. ರಥಯಾತ್ರೆಯಲ್ಲಿ ಎರಡರಿಂದ ಮೂರು ಆನೆಗಳು ಭಾಗಿಯಾಗಿದ್ದವು. ಇಷ್ಟು ವರ್ಷದ ರಥಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ. ಯಾತ್ರೆಯನ್ನು ನೋಡಲು ಬಂದಿದ್ದ ಭಕ್ತರನ್ನು ನೋಡಿ ಭಯಗೊಂಡು ಓಡಿರಬಹುದು ಎಂದು ಹೇಳಲಾಗುತ್ತಿದೆ. ಸ್ವಲ್ಪ ಸಮಯದಲ್ಲಿ ಮಾವುತನ ನಿಯಂತ್ರಣಕ್ಕೆ ಬಂದಿದೆ. ಯಾವುದೇ ಅಪಘಾತಗಳು ಸಂಭವಿಸಿಲ್ಲ. ಒಟ್ಟು 17 ಆನೆಗಳು ಮೆರವಣಿಗೆಯನ್ನು ಮುನ್ನಡೆಸುತ್ತಿವೆ.ಮೆರವಣಿಗೆ ವೇಳೆ ವಾದ್ಯದ ಶಬ್ದಕ್ಕೆ ಆನೆ ಬೆದರಿರಬಹುದು ಎನ್ನಲಾಗುತ್ತಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ.

ಅಹ್ಮದಾಬಾದ್, ಜೂನ್ 27: ಅಹಮದಾಬಾದ್​ನಲ್ಲಿ ನಡೆದ 148ನೇ ಭಗವಾನ್ ಜಗನ್ನಾಥ ರಥಯಾತ್ರೆ ಮೆರವಣಿಗೆಯಲ್ಲಿ ಆನೆಯೊಂದು ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡಿರುವ ವಿಡಿಯೋ ವೈರಲ್ ಆಗಿದೆ. ರಥಯಾತ್ರೆಯಲ್ಲಿ ಎರಡರಿಂದ ಮೂರು ಆನೆಗಳು ಭಾಗಿಯಾಗಿದ್ದವು. ಇಷ್ಟು ವರ್ಷದ ರಥಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ. ಯಾತ್ರೆಯನ್ನು ನೋಡಲು ಬಂದಿದ್ದ ಭಕ್ತರನ್ನು ನೋಡಿ ಭಯಗೊಂಡು ಓಡಿರಬಹುದು ಎಂದು ಹೇಳಲಾಗುತ್ತಿದೆ.

ಸ್ವಲ್ಪ ಸಮಯದಲ್ಲಿ ಮಾವುತನ ನಿಯಂತ್ರಣಕ್ಕೆ ಬಂದಿದೆ. ಯಾವುದೇ ಅಪಘಾತಗಳು ಸಂಭವಿಸಿಲ್ಲ. ಒಟ್ಟು 17 ಆನೆಗಳು ಮೆರವಣಿಗೆಯನ್ನು ಮುನ್ನಡೆಸುತ್ತಿವೆ.ಮೆರವಣಿಗೆ ವೇಳೆ ವಾದ್ಯದ ಶಬ್ದಕ್ಕೆ ಆನೆ ಬೆದರಿರಬಹುದು ಎನ್ನಲಾಗುತ್ತಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 27, 2025 11:12 AM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More