2 ವರ್ಷಗಳ ಬಳಿಕ ಏಕದಿನ ಪಂದ್ಯ ಗೆದ್ದ ಇಂಗ್ಲೆಂಡ್!
ಈ ಬಾರಿ ಶ್ರೀಲಂಕಾ ತಂಡಕ್ಕೆ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 49.3 ಓವರ್ಗಳಲ್ಲಿ 219 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಇಂಗ್ಲೆಂಡ್ ತಂಡವು 46.5 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ವಿದೇಶಿ ಪಿಚ್ನಲ್ಲಿ ಸತತ 11 ಸೋಲುಗಳ ಸರಪಳಿಯನ್ನು ಕಳಚಿಕೊಂಡಿದೆ.
ಇಂಗ್ಲೆಂಡ್ ತಂಡವು ಬರೋಬ್ಬರಿ 2 ವರ್ಷಗಳ ಬಳಿಕ ವಿದೇಶದಲ್ಲಿ ಏಕದಿನ ಪಂದ್ಯ ಗೆದ್ದುಕೊಂಡಿದೆ. ಅಂದರೆ 2024ರ ಬಳಿಕ ಆಂಗ್ಲರ ಪಡೆ ವಿದೇಶಿ ಪಿಚ್ನಲ್ಲಿ ಒಂದೇ ಒಂದು ಏಕದಿನ ಪಂದ್ಯ ಗೆದ್ದಿರಲಿಲ್ಲ. ಈ ಎರಡು ವರ್ಷಗಳ ನಡುವೆ ಸೋತಿರುವುದು ಬರೋಬ್ಬರಿ 11 ಪಂದ್ಯಗಳನ್ನು.
ಆದರೆ ಈ ಬಾರಿ ಶ್ರೀಲಂಕಾ ತಂಡಕ್ಕೆ ಸೋಲುಣಿಸುವಲ್ಲಿ ಯಶಸ್ವಿಯಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 49.3 ಓವರ್ಗಳಲ್ಲಿ 219 ರನ್ಗಳಿಸಿ ಆಲೌಟ್ ಆಗಿತ್ತು.
ಈ ಗುರಿಯನ್ನು ಇಂಗ್ಲೆಂಡ್ ತಂಡವು 46.5 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ವಿದೇಶಿ ಪಿಚ್ನಲ್ಲಿ ಸತತ 11 ಸೋಲುಗಳ ಸರಪಳಿಯನ್ನು ಕಳಚಿಕೊಂಡಿದೆ.
ಇನ್ನು 2023ರ ಬಳಿಕ ಇಂಗ್ಲೆಂಡ್ ಆಡಿರುವ 27 ಏಕದಿನ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 7 ಮ್ಯಾಚ್ಗಳನ್ನು ಮಾತ್ರ. ಇದೀಗ 2026 ರಲ್ಲಿ ಸಿಕ್ಕಿರುವ ಮೊದಲ ಗೆಲುವಿನೊಂದಿಗೆ ಆಂಗ್ಲರ ಪಡೆ ಮತ್ತೆ ಲಯಕ್ಕೆ ಮರಳುವ ನಿರೀಕ್ಷೆಯಿದೆ.
