Video: ಜಮ್ಮು-ಕಾಶ್ಮೀರದ ಗಡಿಯಲ್ಲಿ ಐದು ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

Updated on: Jan 12, 2026 | 7:29 AM

ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆಯ ಬಳಿ ಡ್ರೋನ್ ಚಟುವಟಿಕೆ ಹೆಚ್ಚುತ್ತಿದೆ. ಗಣರಾಜ್ಯೋತ್ಸವಕ್ಕೂ ಮುನ್ನ ಪಾಕಿಸ್ತಾನ ಭಾರತದ ಗಡಿಗಳ ಬಳಿ ಡ್ರೋನ್ ಚಟುವಟಿಕೆಯನ್ನು ಹೆಚ್ಚಿಸಿದ್ದು, ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರವಹಿಸಿವೆ. ಭದ್ರತಾ ಸಂಸ್ಥೆಗಳ ಪ್ರಕಾರ, ಅಂತಾರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿಯ ವಿವಿಧ ಪ್ರದೇಶಗಳಲ್ಲಿ ಒಟ್ಟು ಐದು ಡ್ರೋನ್‌ಗಳು ಪತ್ತೆಯಾಗಿವೆ. ಪೂಂಚ್, ನೌಶೇರಾ, ಧರ್ಮಶಾಲಾ, ರಾಮಗಢ ಮತ್ತು ಪರಾಖ್ ಪ್ರದೇಶಗಳಲ್ಲಿ ಡ್ರೋನ್ ಕಾಣಿಸಿಕೊಂಡ ವರದಿಯಾಗಿದೆ.

ಶ್ರೀನಗರ, ಜನವರಿ 12: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆಯ ಬಳಿ ಡ್ರೋನ್ ಚಟುವಟಿಕೆ ಹೆಚ್ಚುತ್ತಿದೆ. ಗಣರಾಜ್ಯೋತ್ಸವಕ್ಕೂ ಮುನ್ನ ಪಾಕಿಸ್ತಾನ ಭಾರತದ ಗಡಿಗಳ ಬಳಿ ಡ್ರೋನ್ ಚಟುವಟಿಕೆಯನ್ನು ಹೆಚ್ಚಿಸಿದ್ದು, ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರವಹಿಸಿವೆ. ಭದ್ರತಾ ಸಂಸ್ಥೆಗಳ ಪ್ರಕಾರ, ಅಂತಾರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿಯ ವಿವಿಧ ಪ್ರದೇಶಗಳಲ್ಲಿ ಒಟ್ಟು ಐದು ಡ್ರೋನ್‌ಗಳು ಪತ್ತೆಯಾಗಿವೆ. ಪೂಂಚ್, ನೌಶೇರಾ, ಧರ್ಮಶಾಲಾ, ರಾಮಗಢ ಮತ್ತು ಪರಾಖ್ ಪ್ರದೇಶಗಳಲ್ಲಿ ಡ್ರೋನ್ ಕಾಣಿಸಿಕೊಂಡ ವರದಿಯಾಗಿದೆ.

ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿದೆ. ಭಾರತೀಯ ಸೇನೆಯು ತಕ್ಷಣ ಪ್ರತಿಕ್ರಿಯಿಸಿ ಅದರ ಮೇಲೆ ಗುಂಡು ಹಾರಿಸಿತು. ಎಲ್ಲಾ ಡ್ರೋನ್‌ಗಳು ಪಾಕಿಸ್ತಾನದಿಂದ ಬಂದು ಕೆಲವು ನಿಮಿಷಗಳ ಕಾಲ ಭಾರತದ ಭೂಪ್ರದೇಶದ ಮೇಲೆ ಸುಳಿದಾಡಿದ ನಂತರ ಹಿಂತಿರುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ, ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿಯ ಘಗ್ವಾಲ್‌ನ ಪಲೋರಾ ಗ್ರಾಮದಲ್ಲಿ ಪಾಕಿಸ್ತಾನದಿಂದ ಡ್ರೋನ್ ಮೂಲಕ ಬೀಳಿಸಲಾದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ