ಸರ್ಕಾರದ ಮನವಿಯಲ್ಲಿ ಬಿಟ್ಟುಹೋಗಿರುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಕಾವೇರಿ ನೀರಿಗಾಗಿ ಪ್ರತ್ಯೇಕ ಕಾನೂನಾತ್ಮಕ ಹೋರಾಟ: ದರ್ಶನ್ ಪುಟ್ಟಣ್ಣಯ್ಯ

|

Updated on: Sep 04, 2023 | 1:35 PM

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯ ರೈತರ ಸಮಸ್ಯೆ ಮತ್ತು ಮುಂಗಾರು ಕೊರತೆಯಿಂದ ಮುಂಬರುವ ದಿನಗಳಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಅರ್ಥವತ್ತಾಗಿ ಮಂಡಿಸಲು ಸರ್ಕಾರ ವಿಫಲವಾಗಿದೆ ಎಂದು ದರ್ಶನ್ ಹೇಳಿದರು.

ಮಂಡ್ಯ: ರೈತರ ಅವಿರತ ಹೋರಾಟ ಹೊರತಾಗಿಯೂ, ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿದುಹೋಗುತ್ತಲೇ ಇದೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಒಬ್ಬ ರೈತ ನಾಯಕರನಾಗಿ (Farme leader) ರೈತರ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದಾರೆ ಮತ್ತು ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆಯೂ ತಿಳಿದುಕೊಂಡಿದ್ದಾರೆ. ತಮಿಳುನಾಡುಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕೆಂದು ಎಂದು ಅವರು ಕಾನೂನಾತ್ಮಕ ಹೋರಾಟ (legal battle) ನಡೆಸಲು ಅಣಿಯಾಗಿ ಶ್ರೀರಂಗಪಟ್ಟಣದ ಕೆಆರ್ ಎಸ್ ಬಳಿ ಅಹೋರಾತ್ರಿ ಧರಣಿಗೆ ಕುಳಿತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಟಿವಿ9 ಕನ್ನಡ ವಾಹಿನಿಯ ಮಂಡ್ಯ ವರದಿಗಾರನೊಂದಿಗೆ ಮಾತಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯ ರೈತರ ಸಮಸ್ಯೆ ಮತ್ತು ಮುಂಗಾರು ಕೊರತೆಯಿಂದ ಮುಂಬರುವ ದಿನಗಳಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಅರ್ಥವತ್ತಾಗಿ ಮಂಡಿಸಲು ಸರ್ಕಾರ ವಿಫಲವಾಗಿದೆ ಎಂದು ದರ್ಶನ್ ಹೇಳಿದರು. ಇದೇ ಹಿನ್ನೆಲೆಯಲ್ಲಿ ಸರ್ಕಾರ ಸುಪ್ರೀಮ್ ಕೋರ್ಟ್ ಗೆ ಸಲ್ಲಿಸಿರುವ ಮನವಿಯಲ್ಲಿ ಬಿಟ್ಟುಹೋಗಿರುವ ಅಂಶಗಳನ್ನು ಸೇರಿಸಿ ಒಂದು ಪ್ರತ್ಯೇಕವಾದ ಮನವಿ ಸಲ್ಲಿಸಿ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ