ರೈಲಿನ ಮೇಲೆ ಹತ್ತಿ ಹೈವೋಲ್ಟೇಜ್ ತಂತಿ ಸ್ಪರ್ಶಿಸಿ ಒಂದೇ ಕ್ಷಣದಲ್ಲಿ ಸುಟ್ಟು ಕರಕಲಾದ ವ್ಯಕ್ತಿ

Updated on: Apr 24, 2026 | 1:06 PM

ಕೇವಲ ಒಂದು ಕ್ಷಣದ ಅಜಾಗರೂಕತೆ ಅಥವಾ ದುಸ್ಸಾಹಸ ಹೇಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಬಿಹಾರದ ಗರ್ಭಾಂಗಾದಲ್ಲಿ ವ್ಯಕ್ತಿಯೊಬ್ಬ ರೈಲಿನ ಮೇಲೇರಿ ನಡೆಯುವ ಸಾಹಸ ಮಾಡಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣಬಿಟ್ಟಿದ್ದಾರೆ. ಸರಕು ರೈಲು ನಿಧಾನವಾಗಿ ಚಲಿಸುತ್ತಿದ್ದಾಗ ಯುವಕ ಬೋಗಿಯ ಮೇಲೆ ಹತ್ತಿದ್ದಾನೆ. ಇದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ಜನರು ಮತ್ತು ಪ್ರಯಾಣಿಕರು, ಕೆಳಗಿಳಿಯಪ್ಪಾ, ಅಪಾಯವಿದೆ ಎಂದು ಪದೇ ಪದೇ ಕಿರುಚುತ್ತಾ ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾವುದನ್ನೂ ಲೆಕ್ಕಿಸದ ಯುವಕ ಬೋಗಿಯ ಮೇಲೆ ನಡೆಯುತ್ತಾ ಮುಂದೆ ಸಾಗಿದ್ದಾನೆ.

ದರ್ಭಂಗ, ಏಪ್ರಿಲ್ 24: ಕೇವಲ ಒಂದು ಕ್ಷಣದ ಅಜಾಗರೂಕತೆ ಅಥವಾ ದುಸ್ಸಾಹಸ ಹೇಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಬಿಹಾರದ ದರ್ಭಂಗದಲ್ಲಿ ವ್ಯಕ್ತಿಯೊಬ್ಬ ರೈಲಿನ ಮೇಲೇರಿ ನಡೆಯುವ ಸಾಹಸ ಮಾಡಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣಬಿಟ್ಟಿದ್ದಾರೆ. ಸರಕು ರೈಲು ನಿಧಾನವಾಗಿ ಚಲಿಸುತ್ತಿದ್ದಾಗ ಯುವಕ ಬೋಗಿಯ ಮೇಲೆ ಹತ್ತಿದ್ದಾನೆ. ಇದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ಜನರು ಮತ್ತು ಪ್ರಯಾಣಿಕರು, ಕೆಳಗಿಳಿಯಪ್ಪಾ, ಅಪಾಯವಿದೆ ಎಂದು ಪದೇ ಪದೇ ಕಿರುಚುತ್ತಾ ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾವುದನ್ನೂ ಲೆಕ್ಕಿಸದ ಯುವಕ ಬೋಗಿಯ ಮೇಲೆ ನಡೆಯುತ್ತಾ ಮುಂದೆ ಸಾಗಿದ್ದಾನೆ.

ಯುವಕ ಬೋಗಿಯ ಮೇಲ್ಭಾಗದಲ್ಲಿ ನಿಂತು ತನ್ನ ಕೈಯನ್ನು ಅಪಾಯಕಾರಿಯಾಗಿ ಓವರ್‌ಹೆಡ್ ವಿದ್ಯುತ್ ಮಾರ್ಗದ (High-Voltage Line) ಹತ್ತಿರ ಕೊಂಡೊಯ್ದಿದ್ದಾನೆ. ಕೈ ತಂತಿಗೆ ತಗುಲಿದ ತಕ್ಷಣವೇ ದೊಡ್ಡ ಮಟ್ಟದ ಸ್ಫೋಟದಂತಹ ಶಬ್ದದೊಂದಿಗೆ ಬೆಂಕಿ ಕಾಣಿಸಿಕೊಂಡಿತ್ತು.
ವಿದ್ಯುತ್ ಆಘಾತದ ತೀವ್ರತೆಗೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಈತ ಮಾನಸಿಕವಾಗಿ ಅಸ್ಥಿರವಾಗಿದ್ದನೇ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More