HD Devegowda: ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಹೆಚ್ ಡಿ ದೇವೇಗೌಡರು ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡರು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 14, 2023 | 6:17 PM

ದೇವೇಗೌಡರ ಮುಖದಲ್ಲಿ ಆರೋಗ್ಯದ ಕಳೆ ಸೂಸುತ್ತಿದೆ ಮತ್ತು ಮೊದಲಿನ ಲವಿಲವಿಕೆ ಎದ್ದು ಕಾಣುತ್ತಿದೆ. ಕೆಲದಿನಗಳ ಹಿಂದೆ ಗೌಡರು ಅಸ್ವಸ್ಥರಾಗಿದ್ದ ಸುದ್ದಿ ಕೇಳಿ ಕನ್ನಡಿಗರಲ್ಲಿ ಆತಂಕ ಮೂಡಿದ್ದು ಸುಳ್ಳಲ್ಲ. ಆದರೆ, ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ

ಬೆಂಗಳೂರು: ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡರ (HD Devegowda) ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ, ಅವರ ಮುಖದಲ್ಲಿ ಆರೋಗ್ಯದ ಕಳೆ ಸೂಸುತ್ತಿದೆ ಮತ್ತು ಮೊದಲಿನ ಲವಿಲವಿಕೆ ಎದ್ದು ಕಾಣುತ್ತಿದೆ ಮಾರಾಯ್ರೇ. ಕೆಲದಿನಗಳ ಹಿಂದೆ ಗೌಡರು ಅಸ್ವಸ್ಥರಾಗಿದ್ದ ಸುದ್ದಿ ಕೇಳಿ ಕನ್ನಡಿಗರಲ್ಲಿ ಆತಂಕ ಮೂಡಿದ್ದು ಸುಳ್ಳಲ್ಲ. ಆದರೆ, ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಬೆಂಗಳೂರಲ್ಲಿಂದು ಲೋಕನಾಯಕ ಜಯಪ್ರಕಾಶ್ ನಾರಾಯಣ (Jayaprakash Narayan) ಮತ್ತು ಮಾಜಿ ಪ್ರಧಾನ ಮಂತ್ರಿ ವಿಪಿ ಸಿಂಗ್ (VP Singh) ಅವರ ಒಡನಾಡಿಯಾಗಿದ್ದ ಮುಸ್ಲಿಂ ಧುರೀಣ ಒಬೆದುಲ್ಲಾ (Obedullah) ಅವರು ಜೆಡಿಎಸ್ ಪಕ್ಷವನ್ನು ಸೇರಿದರು. ಇದೇ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ದೇವೇಗೌಡರ ಬೆಂಗಳೂರು ನಿವಾಸದಲ್ಲಿ ಸುದ್ದಿಗೋಷ್ಟಿಯೊಂದನ್ನು ಏರ್ಪಡಿಸಿದ್ದರು. ದೊಡ್ಡಗೌಡರು ಹಸನ್ಮುಖದಿಂದ ಸುದ್ದಿಗೋಷ್ಟಿಯಲ್ಲಿ ಬಂದು ಕೂರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Mar 14, 2023 06:17 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.