ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು; ನೇರಾನೇರ ಆವಾಜ್

Updated on: Sep 14, 2026 | 10:43 AM

‘ಬಿಗ್ ಬಾಸ್ ಕನ್ನಡ 13’ ರಿಯಾಲಿಟಿ ಶೋ 2ನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಬಾರಿ ಸದ್ದು ಮಾಡುತ್ತಿದ್ದ ಗಗನ್ ಚಿನ್ನಪ್ಪ ವಿರುದ್ಧ ಕಾಮನರ್ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ನೇರಾನೇರ ಆವಾಜ್ ಹಾಕಲು ಶುರು ಮಾಡಿದ್ದಾರೆ. ಸೆ.14ರ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಬಾರಿ ಸದ್ದು ಮಾಡುತ್ತಿದ್ದ ಗಗನ್ ಚಿನ್ನಪ್ಪ ವಿರುದ್ಧ ಕಾಮನರ್ ಸ್ಪರ್ಧಿಗಳು ಈಗ ತಿರುಗಿ ಬಿದ್ದಿದ್ದಾರೆ. ನೇರಾನೇರ ಆವಾಜ್ ಹಾಕಲು ಶುರು ಮಾಡಿದ್ದಾರೆ. ಸೆಪ್ಟೆಂಬರ್ 14ರ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದರಲ್ಲಿ ಕಾಮನರ್ ಸ್ಪರ್ಧಿ ಧನುಷ್ ಅವರು ಗಗನ್ ಚಿನ್ನಪ್ಪ ಜೊತೆ ವಾಗ್ವಾದ ನಡೆಸಿರುವುದು ಕಾಣಿಸಿದೆ. ತೀರಾ ಸಲುಗೆಯಿಂದ ಮಾತನಾಡಲು ಬಂದ ಧನುಷ್​ಗೆ ಗಗನ್ ಅವರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾರ ಸೆಲೆಬ್ರಿಟಿ ವರ್ಸಸ್ ಕಾಮನರ್ ಎಂಬ ಪೈಪೋಟಿ ಇನ್ನಷ್ಟು ಜಾಸ್ತಿಯಾಗುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More