AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿ ಸಲುಗೆಯಿಂದ ಮಾತಾಡಲು ಬಂದ ಗಗನ್ ಚಿನ್ನಪ್ಪಗೆ ಗ್ರಹಚಾರ ಬಿಡಿಸಿದ ಸುದೀಪ್

ಗಗನ್ ಚಿನ್ನಪ್ಪ ಅವರು ಬಿಗ್ ಬಾಸ್ ಶೋನಲ್ಲಿ ಮೊದಲ ವಾರವೇ ಭಾರಿ ಆತ್ಮವಿಶ್ವಾಸ ಪ್ರದರ್ಶಿಸಿದ್ದಾರೆ. ಆದರೆ ಮಾತಿನ ಭರದಲ್ಲಿ ಅವರು ಬಳಸಿದ ಪದಗಳಿಗೆ ಕಿಚ್ಚ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮಗೆ ಅಗೌರವ ತೋರುವ ರೀತಿಯಲ್ಲಿ ಮಾತನಾಡಿದ ಗಗನ್ ಚಿನ್ನಪ್ಪಗೆ ಸುದೀಪ್ ಅವರು ಗ್ರಹಚಾರ ಬಿಡಿಸಿದ್ದಾರೆ.

ಅತಿ ಸಲುಗೆಯಿಂದ ಮಾತಾಡಲು ಬಂದ ಗಗನ್ ಚಿನ್ನಪ್ಪಗೆ ಗ್ರಹಚಾರ ಬಿಡಿಸಿದ ಸುದೀಪ್
Gagan Chinnappa, Kichcha SudeepImage Credit source: Colors Kannada
ಮದನ್​ ಕುಮಾರ್​
|

Updated on: Sep 13, 2026 | 11:43 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮೊದಲ ವಾರದ ಪಂಚಾಯಿತಿ ನಡೆದಿದೆ. ಈ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಹಲವು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಗಗನ್ ಚಿನ್ನಪ್ಪ, ತಾಂಡವ್ ರಾಮ್ ಅವರಿಗೆ ಸಾಕಷ್ಟು ಎಚ್ಚರಿಕೆ ನೀಡಿದ್ದಾರೆ. ಸಂಚಿಕೆ ನಡೆಯುವಾಗ ಗಗನ್ ಚಿನ್ನಪ್ಪ ಅವರು ಬಹಳ ಸಲುಗೆಯಿಂದ ಮಾತನಾಡಲು ಶುರು ಮಾಡಿದರು. ಆಗ ಅವರು ಬಳಸಿದ ಪದಗಳಿಂದ ಕಿಚ್ಚ ಸುದೀಪ್ ಅವರಿಗೆ ಕೋಪ ಬಂತು. ಮಾತಿನ ಭರದಲ್ಲಿ ಗಡಿ ಮೀರಿದ ಗಗನ್ ಚಿನ್ನಪ್ಪ ಅವರಿಗೆ ಸುದೀಪ್ ಅವರು ಖಡಕ್ ತಿರುಗೇಟು ನೀಡಿದರು.

ಗಗನ್ ಚಿನ್ನಪ್ಪ ಅವರು ಮೊದಲ ವಾರವೇ ವಿಐಪಿ ಆಗುವ ಅವಕಾಶ ಪಡೆದರು. ಆದ್ದರಿಂದ ಅವರ ಆಟವನ್ನು ಕಿಚ್ಚ ಸುದೀಪ್ ಹೊಗಳಿದರು. ‘ನೀವು ಚೆನ್ನಾಗಿ ಆಡಿದ್ದೀರಿ. ಅದು ಸುಲಭ ಅಲ್ಲ’ ಎಂದು ಸುದೀಪ್ ಹೇಳಿದರೆ. ಆದರೆ ಗಗನ್ ಅವರನ್ನು ವಿಐಪಿ ಆಗಲು ಬಿಟ್ಟುಕೊಟ್ಟ ಇನ್ನುಳಿದ ಸ್ಪರ್ಧಿಗಳನ್ನು ಕೂಡ ಎಚ್ಚರಿಸಲು ಸುದೀಪ್ ಪ್ರಯತ್ನಿಸಿದರು. ಅದಕ್ಕೆ ಉತ್ತರಿಸಿದ ಗಗನ್ ಅವರು, ‘ಮೊದಲು ನನ್ನನ್ನು ಹೊಗಳಿ, ಈಗ ಹಾಕಿಕೊಡುತ್ತಿದ್ದೀರಲ್ಲ ಸರ್’ ಎಂದು ಹೇಳಿದರು.

ಈ ಮಾತು ಕೇಳಿಸಿಕೊಂಡ ಸುದೀಪ್ ಅವರಿಗೆ ವಿಪರೀತಿ ಕೋಪ ಬಂತು. ‘ನಮ್ಮ-ನಿಮ್ಮ ನಡುವೆ ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇನೆ. ಹಾಕಿಕೊಡಕ್ಕೆ ನನಗೆ ಬರಲ್ಲ. ಡೈರೆಕ್ಟ್ ಆಗಿ ಹಾಕುತ್ತೇನೆ. ನಾನು ಏನು ಮಾತನಾಡಲು ಹೊರಟಿದ್ದೇನೆ ಎಂಬುದು ಗೊತ್ತಿಲ್ಲದೇ ನೀವು ಮುಂಚಿತವಾಗಿ ಮಾತನಾಡಿದರೆ ನೀವು ನನ್ನನ್ನು ಎದುರು ಹಾಕಿಕೊಳ್ಳುತ್ತೀರಿ’ ಎಂದು ಸುದೀಪ್ ಅವರು ಎಚ್ಚರಿಕೆ ನೀಡಿದರು.

‘ನಿಮ್ಮನ್ನು ಹೊಗಳಿದ ಮಾತ್ರಕ್ಕೆ ನಾನು ಬೇರೆಯವರ ಬಗ್ಗೆ ಮಾತನಾಡಬಾರದು ಅಂತೇನೂ ಇಲ್ಲ. ಹೊಗಳಿ ಹಾಕ್ಕೊಡ್ತೀರಿ ಎಂದರೆ ಯಾವ ರೀತಿಯ ಭಾಷೆ ಇದು? ನಿಮಗೂ ನಮಗೂ ಸ್ನೇಹವೇ ಇಲ್ಲ. ಇಲ್ಲಿ ನಾನು ನಿರೂಪಕ, ನೀವು ಸ್ಪರ್ಧಿ. ನಾವು ಗೌರವಯುತವಾಗಿ ಮಾತನಾಡಬೇಕು. ನಿಮ್ಮನ್ನು ಹೊಗಳಿದ ರೀತಿಯಲ್ಲೇ ಬೇರೆಯವರನ್ನು ಸರಿಪಡಿಸುವ ಅಧಿಕಾರ ಕೂಡ ನನಗೆ ಇದೆ. ಇದನ್ನು ಹಾಕ್ಕೊಡೋದು ಎನ್ನಲ್ಲ. ತಿದ್ದುವುದು ಅಂತಾರೆ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್: ಉಳಿದವರಿಗೆ ಏಕವಚನ ಕೊಟ್ಟು ಗೌರವ ನಿರೀಕ್ಷೆ ಮಾಡಿದ ಗಗನ್ ಚಿನ್ನಪ್ಪ

ಸುದೀಪ್ ಅವರು ಈ ರೀತಿ ಹೇಳಿದ ಬಳಿಕ ಗಗನ್ ಚಿನ್ನಪ್ಪ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಸಲುಗೆ ತೆಗೆದುಕೊಳ್ಳಲು ಹೋಗಿ ಮಿತಿಮೀರಿ ಮಾತನಾಡಿದ್ದಕ್ಕೆ ಅವರು ಕ್ಷಮೆ ಕೇಳಿದರು. ಅವರ ಕ್ಷಮೆಯನ್ನು ಸುದೀಪ್ ಒಪ್ಪಿದರು. ಇನ್ಮುಂದೆ ಈ ರೀತಿ ಮಾತನಾಡಬಾರದು ಎಂಬುದು ಇನ್ನುಳಿದ ಸ್ಪರ್ಧಿಗಳಿಗೂ ಪಾಠವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!