ಬೆಂಗಳೂರು ಏರ್ಪೋರ್ಟ್ ಟೋಲ್ ಟ್ರಾಫಿಕ್ ಕಿರಿಕಿರಿ: ತಮಿಳುನಾಡು ಮಾದರಿ ತಂತ್ರಜ್ಞಾನಕ್ಕೆ ಮೋಹನ್‌ದಾಸ್ ಪೈ ಆಗ್ರಹ!
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಟೋಲ್ ಪ್ಲಾಜಾದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಫಾಸ್ಟ್‌ಟ್ಯಾಗ್ ವೈಫಲ್ಯವೇ ಇದಕ್ಕೆ ಪ್ರಮುಖ ಕಾರಣ. ಈ ಸಮಸ್ಯೆಗೆ ಪರಿಹಾರವಾಗಿ, ಐಟಿ ದಿಗ್ಗಜ ಮೋಹನ್ ದಾಸ್ ಪೈ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ತಮಿಳುನಾಡು ಮಾದರಿಯ ಮಲ್ಟಿ-ಲೇನ್ ಫ್ರೀ ಫ್ಲೋ ಟೋಲ್ ವ್ಯವಸ್ಥೆ ಜಾರಿಗೆ ಒತ್ತಾಯಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 04: ಬೆಂಗಳೂರಲ್ಲಿ ಅತಿ ಹೆಚ್ಚು ಟ್ರಾಫಿಕ್ ಆಗುವ ರಸ್ತೆ ಅಂದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ. ಅದಕ್ಕೆ ಕಾರಣ ಅಂದರೆ ಟೋಲ್ ಪ್ಲಾಜಾ. ಇದರಿಂದ ನಿಮಿಷಗಟ್ಟಲೇ ಪ್ರತಿ ವಾಹನ ಕಾಯಲೇಬೇಕಾಗುತ್ತದೆ. ಅದಕ್ಕೆ ಬ್ರೇಕ್ ಹಾಕಲು ಐಟಿ ದಿಗ್ಗಜ ಮೋಹನ್ ದಾಸ್ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಒತ್ತಾಯಿಸಿದ್ದಾರೆ.
ಟೋಲ್ ಪ್ಲಾಜಾ ಎಡವಟ್ಟು: ಏರ್‌ಪೋರ್ಟ್ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಕ್ಯೂ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ ಟ್ರಾಫಿಕ್ ಬಗ್ಗೆ ಈಗಾಗಲೇ ದೊಡ್ಡಮಟ್ಟದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ, ಅಸಮಾಧಾನ ವ್ಯಕ್ತವಾಗುತ್ತ ಇರುತ್ತದೆ. ಇದಕ್ಕೆ ಕಾರಣ ಟೋಲ್ ಪ್ಲಾಜಾ. ಟೋಲ್ ಪ್ಲಾಜಾದಲ್ಲಿ ಸರಿಯಾಗಿ ಸ್ಕ್ಯಾನ್ ಆಗುವುದಿಲ್ಲ, ಹೀಗಾಗಿ ಫಾಸ್ಟ್ ಟ್ಯಾಗ್ ಮೂಲಕ ಹಣ ಕಟ್ ಆಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತಿದೆ.
‘ಮಲ್ಟಿ-ಲೈನ್ ಫ್ರೀ ಫ್ಲೋ’ ಮಾದರಿ ಜಾರಿಗೆ ಆಗ್ರಹ: ನಿತಿನ್ ಗಡ್ಕರಿಗೆ ಮೋಹನ್ ದಾಸ್ ಪೈ ಒತ್ತಾಯ
ಫಾಸ್ಟ್ ಟ್ಯಾಗ್ ಸ್ಕ್ಯಾನ್ ಸಮಸ್ಯೆಯಿಂದ ಕಿಮೀಗಟ್ಟಲೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಐಟಿ ದಿಗ್ಗಜ ಮೋಹನ್ ದಾಸ್ ಪೈ, ಏರ್ಪೋರ್ಟ್ ಟೋಲ್ನಲ್ಲಿ ಮಲ್ಟಿ-ಲೈನ್ ಫ್ರೀ ಫ್ಲೋ ಟೋಲ್ ಮಾದರಿ ಜಾರಿಗೆ ತನ್ನಿ ಎಂದು ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಈ ಮಾದರಿ ಜಾರಿ ಮಾಡಿದರೆ ಏರ್‌ಪೋರ್ಟ್ ಮಾರ್ಗದ ಟ್ರಾಫಿಕ್ ಕಂಟ್ರೋಲ್ ಆಗುವ ನಿರೀಕ್ಷೆಯಿದ್ದು, ತಮಿಳುನಾಡು ಟೆಕ್ನಾಲಜಿ ನಗರಕ್ಕೂ ತನ್ನಿ ಎಂಬ ಕೂಗು ಸೋಶಿಯಲ್ ಮೀಡಿಯಾದಲ್ಲೂ ಜೋರಾಗಿದೆ.
ಏನಿದು ‘ಮಲ್ಟಿ-ಲೈನ್ ಫ್ರೀ ಫ್ಲೋ’ ಟೆಕ್ನಾಲಜಿ?
ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿ-179B ರಸ್ತೆಯ ತಾಂಬರಂ ಟು ದಿಂಡಿವನಂ ವಿಭಾಗದಲ್ಲಿರುವ ಪರನೂರ್ ಟೋಲ್ ಪ್ಲಾಜಾದಲ್ಲಿ ಮಲ್ಟಿ-ಲೈನ್ ಫ್ರೀ ಫ್ಲೋ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಮತ್ತು ANPR ಕ್ಯಾಮೆರಾಗಳ ಮೂಲಕ ಟೋಲ್ ಸಂಗ್ರಹ ಮಾಡಲಾಗುತ್ತೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲಿಸುವ ಅಗತ್ಯವಿಲ್ಲ. ವಾಹನಗಳು ಸ್ಟಾಪ್ ಮಾಡದೇನೇ ವಾಹನಗಳು ಟೋಲ್ ಕ್ರಾಸ್ ಮಾಡಬಹುದು. ಇದರಿಂದ ಟೋಲ್ ಪ್ಲಾಜಾ ಬಳಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಬಹುದು. ಇದೇ ಟೆಕ್ನಾಲಜಿಯನ್ನ ಬೆಂಗಳೂರಿಗೆ ತರಲು ಉದ್ಯಮಿ ಮೋಹನ್ ದಾಸ್ ಪೈ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೆನಡಾ ಪ್ರಜೆ ವಿಡಿಯೋ ವೈರಲ್ ಬೆನ್ನಲ್ಲೇ ಫುಟ್‌ಪಾತ್ ದುರಸ್ತಿ: ಜಿಬಿಎ ವಿರುದ್ಧ ಬೆಂಗಳೂರಿಗರು ಆಕ್ರೋಶ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್ ರಸ್ತೆ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಮೋಹನ್ ದಾಸ್ ಒತ್ತಾಯ ಮಾಡಿದ್ದು, ಈ ಬಗ್ಗೆ ಹೆದ್ದಾರಿ ಸಚಿವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




