ಬೆಂಗಳೂರು-ನೆಲಮಂಗಲ ಹೆದ್ದಾರಿಯಲ್ಲಿ ಭಾರಿ ವಾಹನ ದಟ್ಟಣೆ: ರಜೆ ಹಿನ್ನೆಲೆ 4 ಕಿಮೀಗೂ ಹೆಚ್ಚು ಟ್ರಾಫಿಕ್ ಜಾಮ್, ಆಂಬುಲೆನ್ಸ್ ಸಿಲುಕಿ ಪರದಾಟ
ಗಣೇಶ ಚತುರ್ಥಿ ಹಾಗೂ ವೀಕೆಂಡ್ ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದೆ. ನೆಲಮಂಗಲದ ಕುಣಿಗಲ್ ಸರ್ಕಲ್ ಬಳಿ ಸುಮಾರು ನಾಲ್ಕೈದು ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಈ ಟ್ರಾಫಿಕ್ ಜಾಮ್‌ನಲ್ಲಿ ಆಂಬ್ಯುಲೆನ್ಸ್ ವಾಹನಗಳು ಸಿಲುಕಿ ಪರದಾಡುತ್ತಿರುವುದು ಕಂಡುಬಂದಿದೆ.
ನೆಲಮಂಗಲ, ಸೆಪ್ಟೆಂಬರ್ 12: ಸೋಮವಾರ ಗಣೇಶ ಚತುರ್ಥಿ ರಜೆ ಹಾಗೂ ವಾರಾಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದೆ. ಊರಿಗೆ ಹೊರಟ ಜನರಿಂದಾಗಿ ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ದಟ್ಟಣೆಯಿಂದ ಕೂಡಿದ್ದು, ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಮುಖ್ಯವಾಗಿ, ನೆಲಮಂಗಲದ ಕುಣಿಗಲ್ ಸರ್ಕಲ್ ಬಳಿ ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿ ವಾಹನಗಳು ನಾಲ್ಕೈದು ಕಿಲೋಮೀಟರ್‌ಗಳಷ್ಟು ದೂರ ನಿಧಾನವಾಗಿ ಚಲಿಸುತ್ತಿದ್ದು, ಕೆಲವೆಡೆ ಸಂಪೂರ್ಣವಾಗಿ ನಿಂತಿವೆ. ಈ ಟ್ರಾಫಿಕ್ ಜಾಮ್‌ನಲ್ಲಿ ಸಾಮಾನ್ಯ ವಾಹನಗಳಷ್ಟೇ ಅಲ್ಲದೆ, ರೋಗಿಗಳನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ವಾಹನಗಳು ಸಹ ಸಿಲುಕಿಕೊಂಡಿದ್ದು, ತುರ್ತು ಸೇವೆಗಳಿಗೂ ಅಡ್ಡಿಯಾಗಿದೆ.
ಈ ವಾಹನ ದಟ್ಟಣೆಯು ರಜಾದಿನಗಳಲ್ಲಿ ಪ್ರವಾಸಕ್ಕೆ ಹೊರಟವರು, ಹಬ್ಬಕ್ಕೆ ಊರಿಗೆ ತೆರಳುವವರು ಹಾಗೂ ವಾರಾಂತ್ಯದ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನಗಳ ಸಾಲುಗಟ್ಟಿದ ದೃಶ್ಯಗಳು ಸಾಮಾನ್ಯವಾಗಿದ್ದು, ಟ್ರಾಫಿಕ್ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಗಗನ್-ತಾಂಡವ್ ರಾಮ್ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಅವ್ನೇ ಬೇಕೆಂದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್ಪಿಂಗ್

