AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್: ಉಳಿದವರಿಗೆ ಏಕವಚನ ಕೊಟ್ಟು ಗೌರವ ನಿರೀಕ್ಷೆ ಮಾಡಿದ ಗಗನ್ ಚಿನ್ನಪ್ಪ

'ಸೀತಾ ರಾಮ' ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಹ ಸ್ಪರ್ಧಿ ಧನುಷ್ 'ಬ್ರೋ' ಎಂದಿದ್ದಕ್ಕೆ ಕೂಗಾಡಿದ್ದ ಗಗನ್, ತಮಗೆ ಗೌರವ ನೀಡುವಂತೆ ತಾಕೀತು ಮಾಡಿ ಏಕವಚನದಲ್ಲಿ ನಿಂದಿಸಿದ್ದಾರೆ. ಈ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ವೀಕೆಂಡ್‌ನಲ್ಲಿ ಸುದೀಪ್ ಕ್ಲಾಸ್ ತಗೋಳೋದು ಖಚಿತ ಎನ್ನಲಾಗುತ್ತಿದೆ.

ಬಿಗ್ ಬಾಸ್: ಉಳಿದವರಿಗೆ ಏಕವಚನ ಕೊಟ್ಟು ಗೌರವ ನಿರೀಕ್ಷೆ ಮಾಡಿದ ಗಗನ್ ಚಿನ್ನಪ್ಪ
ಗಗನ್
ರಾಜೇಶ್ ದುಗ್ಗುಮನೆ
|

Updated on: Sep 10, 2026 | 7:02 AM

Share

ಮುಖ್ಯಾಂಶಗಳು

  • 'ಬ್ರೋ' ಎಂದಿದ್ದಕ್ಕೆ ಗಗನ್ ಗರಂ
  • ‘ವಿಐಪಿ ಗಗನ್’ ಎನ್ನಲು ಆದೇಶಿಸಿದ ನಟ
  • ಗಗನ್ ನಡವಳಿಕೆಗೆ ವೀಕ್ಷಕರು ಶಾಕ್

‘ಸೀತಾ ರಾಮ’ ಧಾರಾವಾಹಿ ಮೂಲಕ ಮಿಂಚಿದವರು ಗಗನ್ ಚಿನ್ನಪ್ಪ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ, ಅವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಕೆಲವರು ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ವೀಕೆಂಡ್​ನಲ್ಲಿ ಅವರಿಗೆ ಕ್ಲಾಸ್ ನಡೆಯಲೇಬೇಕು ಎಂದು ಆಶಿಸಿದ್ದಾರೆ.

ಧಾರಾವಾಹಿಯಲ್ಲಿ ನೋಡುವ ವ್ಯಕ್ತಿಗೂ, ಅವರ ನಿಜ ಜೀವನದ ವ್ಯಕ್ತಿತ್ವಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಇದಕ್ಕೆ ಗಗನ್ ಚಿನ್ನಪ್ಪ ಉತ್ತಮ ಸಾಕ್ಷಿ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಅವರು ಮಾಡಿರೋ ರಾಮ್ ಪಾತ್ರಕ್ಕೂ ಅವರ ನಿಜ ವ್ಯಕ್ತಿತ್ವಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ತೆರಳಿದ ಬಳಿಕ ಅನೇಕರಿಗೆ ಈ ಅನುಭವ ಆಗಿದೆ. ಬಿಗ್ ಬಾಸ್ ಮನೆಯ ವಿಐಪಿ ಸದಸ್ಯನಾಗಿ ಗಗನ್ ಹೊರ ಹೊಮ್ಮಿದ್ದಾರೆ. ಎಲ್ಲಾ ಟಾಸ್ಕ್​​ಗಳ ಜವಾಬ್ದಾರಿಯನ್ನು ಅವರಿಗೇ ನೀಡಲಾಗುತ್ತಿದೆ. ಈ ವೇಳೆ ಕಾಮನ್ ಮ್ಯಾನ್ ಆಗಿ ತೆರಳಿದ ಧನುಷ್ ಅವರು ಗಗನ್ ಅವರಿಗೆ ‘ಬ್ರೋ’ ಎಂದು ಕರೆದಿದ್ದಾರೆ. ಇದರಿಂದ ಗಗನ್ ಕೋಪ ನೆತ್ತಿಗೇರಿದೆ.

‘ನನಗೆ ಏಕೆ ಬ್ರೋ ಎಂದು ಕರೆದಿರಿ? ನನ್ನ ವಯಸ್ಸೆಷ್ಟು, ನಿಮ್ಮ ವಯಸ್ಸೆಷ್ಟು’ ಎಂದು ಕೇಳಿದರು. ಜೊತೆಗೆ, ‘ವಿಐಪಿ ಗಗನ್’ ಎಂದು ಕರೆಯುವಂತೆ ಧನುಷ್​​ಗೆ ಆದೇಶ ನೀಡಿದರು. ಇಷ್ಟೆಲ್ಲ ಗೌರವ ನಿರೀಕ್ಷೆ ಮಾಡಿದ ಗಗನ್ ಅವರು ಧನುಷ್ ಬಳಿ, ‘ಹೋಗಲೋ, ನಡ್ಯಲ್ಲೋ’ ಎಂದು ಸಂಬೋಧಿಸಿದರು. ಈ ಬಗ್ಗೆ ಚರ್ಚೆ ಶುರುವಾಗಿದೆ. ಅವರಿಗೆ ಅಹಂ ಹೆಚ್ಚು ಎಂಬ ಚರ್ಚೆ ಶುರುವಾಗಿದೆ. ನಾಮಿನೇಷನ್ ಬಗ್ಗೆ ನಡೆದ ಓಪನ್ ಚರ್ಚ ಬಗ್ಗೆಯೂ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ನಾಮಿನೇಷನ್ ಬಗ್ಗೆ ಗಗನ್-ತಾಂಡವ್ ಓಪನ್ ಟಾಕ್; ಮೊದಲ ವಾರವೇ ಕಿಚ್ಚನ ಕ್ಲಾಸ್ ಫಿಕ್ಸ್

ಕಳೆದ ವರ್ಷದ ಸೀಸನ್​ ಅಲ್ಲಿ ಅಶ್ವಿನಿ ಗೌಡ ಅವರು ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಿ, ತಮಗೆ ಗೌರವ ಸಿಗಲಿ ಎಂದು ಆಶಿಸುತ್ತಾ ಇದ್ದರು. ಇದು ಎಷ್ಟು ಸರಿ ಎಂಬ ಚರ್ಚೆ ನಡೆದಿತ್ತು. ಈ ವಿಷಯವಾಗಿ ಸುದೀಪ್ ಕ್ಲಾಸ್​ ಕೂಡ ತೆಗೆದುಕೊಂಡಿದ್ದರು.ಈ ಬಾರಿ ಗಗನ್ ಕೂಡ ಅದೇ ರೀತಿಯ ತಪ್ಪನ್ನು ಮಾಡುತ್ತಿದ್ದಾರೆ. ಹೀಗಾಗಿ, ವೀಕೆಂಡ್​ ವೇಳೆ ಕಿಚ್ಚನ ಕ್ಲಾಸ್ ನಡೆಯುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ