Abu Salem: 1993 ಮುಂಬೈ ಸ್ಫೋಟ ಅಪರಾಧಿ ಅಬು ಸಲೇಂನನ್ನು ದೆಹಲಿಯಿಂದ ಮನ್ಮಾಡ್​ಗೆ ರೈಲಿನಲ್ಲಿ ಕರೆತಂದ ಪೊಲೀಸರು

|

Updated on: Aug 04, 2024 | 10:15 AM

1993ರ ಮುಂಬೈ ಬಾಂಬ್​ ಸ್ಫೋಟದ ಪ್ರಮುಖ ಅಪರಾಧಿ ಅಬು ಸಲೇಂನನ್ನು ಪೊಲೀಸರು ದೆಹಲಿಯಿಂದ ಮನ್ಮಾಡ್​ಗೆ ರೈಲಿನಲ್ಲಿ ಕರೆತಂದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ, ಮನ್ಮಾಡ್ ನಿಲ್ದಾಣದಲ್ಲಿ ಇಳಿದ ನಂತರ ಅವರನ್ನು ಪೊಲೀಸ್ ವ್ಯಾನ್‌ನಲ್ಲಿ ನಾಸಿಕ್ ರಸ್ತೆಯ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

1993ರ ಮುಂಬೈ ಬಾಂಬ್​ ಸ್ಫೋಟದ ಪ್ರಮುಖ ಅಪರಾಧಿ ಅಬು ಸಲೇಂನನ್ನು ಪೊಲೀಸರು ದೆಹಲಿಯಿಂದ ಮನ್ಮಾಡ್​ಗೆ ರೈಲಿನಲ್ಲಿ ಕರೆತಂದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ, ಮನ್ಮಾಡ್ ನಿಲ್ದಾಣದಲ್ಲಿ ಇಳಿದ ನಂತರ ಅವರನ್ನು ಪೊಲೀಸ್ ವ್ಯಾನ್‌ನಲ್ಲಿ ನಾಸಿಕ್ ರಸ್ತೆಯ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಸಲೇಂನನ್ನು ಮನ್ಮಾಡ್​ಗೆ ಕರೆತರಲಾಗುತ್ತಿದೆ ಎನ್ನುವ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿಟ್ಟಿದ್ದರು. ಪೊಲೀಸರು ಸಲೇಂ ಜತೆಗೆ ರೈಲು ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಆತನನ್ನು ನೋಡಲು ಜನಸಮೂಹವೇ ನೆರೆದಿತ್ತು.
ರಾಷ್ಟ್ರ ರಾಜಧಾನಿಯಿಂದ ನವದೆಹಲಿ-ಬೆಂಗಳೂರು-ಕರ್ನಾಟಕ ಎಕ್ಸ್‌ಪ್ರೆಸ್ ಮೂಲಕ ಸೇಲಂ ರೈಲಿನಿಂದ ಇಳಿಸಿದ ನಂತರ ಅವರು ಪೊಲೀಸ್ ಕಾರಿನಲ್ಲಿ ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ.

ಪ್ರಸ್ತುತ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಲೇಂ ಕಳೆದ ತಿಂಗಳು ‘ಸುರಕ್ಷತಾ ಕಾಳಜಿ’ಯನ್ನು ಉಲ್ಲೇಖಿಸಿ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮೂಲಕ ತಲೋಜಾ ಕೇಂದ್ರ ಕಾರಾಗೃಹದಿಂದ ನಾಸಿಕ್ ಕೇಂದ್ರ ಕಾರಾಗೃಹಕ್ಕೆ ತನ್ನ ವರ್ಗಾವಣೆಯನ್ನು ತಡೆಯಲು ಕಳೆದ ತಿಂಗಳು ಪ್ರಯತ್ನಿಸಿದ್ದರು.

ಆರಂಭಿಕ ಮೇಲ್ಮನವಿಯನ್ನು ಸೆಷನ್ಸ್ ನ್ಯಾಯಾಲಯವು ಜೂನ್ 25 ರಂದು ನಿರಾಕರಿಸಿತು, ಆದರೆ ನ್ಯಾಯಾಲಯವು ಜುಲೈ 3 ರವರೆಗೆ ಅವರ ವರ್ಗಾವಣೆಯನ್ನು ವಿಳಂಬಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತು.
1993 ಬಾಂಬ್​ ಸ್ಫೋಟದ ವಿವರ

ಅಂದು 1993ರ ಮಾರ್ಚ್‌ 12. ಮುಂಬೈ ನಗರ ಬಾಂಬ್​ ದಾಳಿಯಿಂದ ನಡುಗಿ ಹೋಗಿತ್ತು. ಮಹಾನಗರದ 12 ಕಡೆ ಶಕ್ತಿಶಾಲಿ ಬಾಂಬ್‌ಗಳು ಸ್ಪೋಟಗೊಂಡು 250ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಮುಂಬೈ ನಗರದಲ್ಲಿ ಡಿಸೆಂಬರ್‌-1992ರಿಂದ ಜನವರಿ-1993ರ ಅವಧಿಯಲ್ಲಿ ನಡೆದ ರಕ್ತಸಿಕ್ತ ದಂಗೆಗೆ ಪ್ರತಿಯಾಗಿ ಈ ದಾಳಿ ನಡೆದಿತ್ತು. 1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಹಿಂದೂಪರ ಸಂಘಟನೆಗಳಿಂದ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರ ಮುಂಬೈನಲ್ಲಿ ಈ ಸರಣಿ ಬಾಂಬ್‌ ಸ್ಫೋಟ ನಡೆದಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Follow us on