ಬೆಂಗಳೂರು, ಮೇ,16: ಸಿಲಿಕಾನ್ ಸಿಟಿ ಬೆಂಗಳೂರಿನ ಜೆ.ಪಿ. ಪಾರ್ಕ್ ಹಿಂಭಾಗದಲ್ಲಿರುವ ಎಂಇಎಸ್ (MES) ರಸ್ತೆ ಮೇಲ್ಸೇತುವೆಯ ಕೆಳಭಾಗವು ಪ್ರಸ್ತುತ ಅನಧಿಕೃತ ಕಸದ ತೊಟ್ಟಿಯಾಗಿ (Black Spot) ಮಾರ್ಪಟ್ಟಿದೆ. ನಾಗರಿಕ ಪ್ರಜ್ಞೆಯ ಕೊರತೆ ಮತ್ತು GBA ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಈ ಪ್ರದೇಶವೇ ಸಾಕ್ಷಿಯಾಗಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕೊಳೆತ ಆಹಾರದ ಪೊಟ್ಟಣಗಳು ಮತ್ತು ಇತರ ಕಸದ ರಾಶಿಯನ್ನು ನೋಡಿದರೆ ಇದು ಕೇವಲ ಒಂದು ದಿನದಲ್ಲಿ ಸೃಷ್ಟಿಯಾದದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ಯಾವುದೇ ಕಾನೂನಿನ ಭಯವಿಲ್ಲದೆ ಬೇಜವಾಬ್ದಾರಿ ನಾಗರಿಕರು ಮತ್ತು ಸ್ಥಳೀಯ ವ್ಯಾಪಾರಿಗಳು ಈ ಸಾರ್ವಜನಿಕ ಜಾಗವನ್ನು ಕಸ ಸುರಿಯುವ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇಡೀ ಪ್ರದೇಶವು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ಭಾರಿ ಕುತ್ತು ತಂದಿಟ್ಟಿದೆ. ಈ ಬಗ್ಗೆ ವಿಡಿಯೋವೊಂದನ್ನು @KarnatakaPortfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Sat, 16 May 26