Video: ಅಪಾರ್ಟ್​​ಮೆಂಟ್​ನ ಮೆಟ್ಟಿಲು ಕುಸಿತ, ಲಿಫ್ಟ್​ ಇಲ್ಲ, ಫ್ಲಾಟ್​ನಲ್ಲೇ ಸಿಲುಕಿದ 6 ಕುಟುಂಬ

Updated on: Aug 05, 2025 | 8:17 AM

ಗಾಜಿಯಾಬಾದ್​ನ ವಸುಂಧರದಲ್ಲಿರುವ ವಸತಿ ಕಟ್ಟಡದ ಮೆಟ್ಟಿಲುಗಳ ಒಂದು ಭಾಗ ಕುಸಿದಿದ್ದು, ನಿವಾಸಿಗಳು 10 ಗಂಟೆಗಳ ಕಾಲ ತಮ್ಮ ಫ್ಲ್ಯಾಟ್​​ನಲ್ಲೇ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದಾಗ್ಯೂ, ಲಿಫ್ಟ್ ಅಥವಾ ಯಾವುದೇ ಸುರಕ್ಷಿತ ನಿರ್ಗಮನ ಮಾರ್ಗವಿಲ್ಲದ ಕಾರಣ ಮೇಲಿನ ಮಹಡಿಯಲ್ಲಿ ಹಲವಾರು ಕುಟುಂಬಗಳು ಕುಸಿತದಲ್ಲಿ ಸಿಲುಕಿಕೊಂಡಿತ್ತು.

ಗಾಜಿಯಾಬಾದ್, ಆಗಸ್ಟ್ 05: ಗಾಜಿಯಾಬಾದ್​ನ ವಸುಂಧರದಲ್ಲಿರುವ ವಸತಿ ಕಟ್ಟಡದ ಮೆಟ್ಟಿಲುಗಳ ಒಂದು ಭಾಗ ಕುಸಿದಿದ್ದು, ನಿವಾಸಿಗಳು 10 ಗಂಟೆಗಳ ಕಾಲ ತಮ್ಮ ಫ್ಲಾಟ್​​ನಲ್ಲೇ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದಾಗ್ಯೂ, ಲಿಫ್ಟ್ ಅಥವಾ ಯಾವುದೇ ಸುರಕ್ಷಿತ ನಿರ್ಗಮನ ಮಾರ್ಗವಿಲ್ಲದ ಕಾರಣ ಮೇಲಿನ ಮಹಡಿಯಲ್ಲಿ ಹಲವಾರು ಕುಟುಂಬಗಳು ಕುಸಿತದಲ್ಲಿ ಸಿಲುಕಿಕೊಂಡಿತ್ತು.

ಮೆಟ್ಟಿಲು ಕುಸಿತದಿಂದಾಗಿ ಹಲವಾರು ಫ್ಲಾಟ್‌ಗಳಿಗೆ ನೇರ ಪ್ರವೇಶ ಕಡಿತಗೊಂಡಿದ್ದು, ಕನಿಷ್ಠ ಆರು ಕುಟುಂಬಗಳು ಸುಮಾರು 10 ಗಂಟೆಗಳ ಕಾಲ ತಮ್ಮ ಮನೆಗಳೊಳಗೆ ಸಿಲುಕಿಕೊಂಡಿವೆ. ಮೂರನೇ ಮಹಡಿಯಲ್ಲಿರುವ  ಫ್ಲಾಟ್  H-110 ಗೆ ಹೋಗುವ ಕಾರಿಡಾರ್ ಕೂಡ ಈ ಘಟನೆಯಲ್ಲಿ ಕುಸಿದಿದೆ. 10 ಗಂಟೆಗಳ ನಂತರ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ತಲುಪಿ, ಏಣಿಯನ್ನು ಬಳಸಿ ಸಿಕ್ಕಿಬಿದ್ದ ನಿವಾಸಿಗಳನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More