ಭಾವಿ ಪತ್ನಿಗೆ ಪ್ರೀತಿಯಿಂದ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ

Updated on: Jun 25, 2026 | 10:27 PM

ಮುಖ್ಯಾಂಶಗಳು

  • ಮದುವೆಗೆಂದು ಚಿನ್ನ ಖರೀದಿಸಿದ್ದ ಯುವಕನಿಗೆ ಶಾಕ್
  • ನಕಲಿ ಬಂಗಾರ ಹಾಕಿದ್ದಾನೆ ಎಂದು ಮದುವೆ ಕ್ಯಾನ್ಸಲ್ ಮಾಡಿದ ಯುವತಿ ಮನೆಯವರು
  • ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದ ಘಟನೆ

ಯುವಕನೋರ್ವ ಈಗಾಗಲೇ ಯುವತಿಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಿಶ್ಚಿತಾರ್ಥದಲ್ಲಿ ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿಯಾಗಿದೆ. ಹೀಗಾಗಿ ವಧು ಕುಟುಂಬಸ್ಥರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಯುವಕ ಕಂಗಾಲಾಗಿದ್ದಾನೆ. ಈ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಸಂತೋಷ್ ಟೋಪೋಜಿ ಎನ್ನುವಾತ 100 ಗ್ರಾಂ ಚಿನ್ನ ಖರೀದಿಸಿದ್ದು, ಇದನ್ನು ನಿಶ್ಚಿತಾರ್ಥದಲ್ಲಿ ಹುಡುಗಿಗೆ ಹಾಕಿದ್ದ. ಆದ್ರೆ, ಆ ಚಿನ್ನ ನಕಲಿ ಎಂದು ಗೊತ್ತಾಗಿದೆ.

ಹಾವೇರಿ, (ಜೂನ್ 25): ಯುವಕನೋರ್ವ ಈಗಾಗಲೇ ಯುವತಿಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಿಶ್ಚಿತಾರ್ಥದಲ್ಲಿ ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿಯಾಗಿದೆ. ಹೀಗಾಗಿ ವಧು ಕುಟುಂಬಸ್ಥರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಯುವಕ ಕಂಗಾಲಾಗಿದ್ದಾನೆ. ಈ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಸಂತೋಷ್ ಟೋಪೋಜಿ ಎನ್ನುವಾತ 100 ಗ್ರಾಂ ಚಿನ್ನ ಖರೀದಿಸಿದ್ದು, ಇದನ್ನು ನಿಶ್ಚಿತಾರ್ಥದಲ್ಲಿ ಹುಡುಗಿಗೆ ಹಾಕಿದ್ದ. ಆದ್ರೆ, ಆ ಚಿನ್ನ ನಕಲಿ ಎಂದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ಹುಡುಗಿ ಕಡೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಹೌಹಾರಿದ ಸಂತೋಷ್, ನಕಲಿ ಚಿನ್ನ ಕೊಟ್ಟ ವಂಚಿಸಿದ್ದ ವಿಷ್ಣುಕಾಂತ್ ರಾವಲ್, ಬಳ್ಳಾರಿ ನಾಗನ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Published on: Jun 25, 2026 10:25 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More