ಚಿನ್ನ ಕಳೆದುಕೊಂಡ್ರೂ, ಸಿಕ್ಕಿದರೂ ಕಷ್ಟಗಳು ತಪ್ಪಿದ್ದಲ್ಲ ಯಾಕೆ ಗೊತ್ತಾ?

Updated on: Sep 13, 2025 | 6:39 AM

ಚಿನ್ನವು ಗುರು ಗ್ರಹದೊಂದಿಗೆ ಸಂಬಂಧ ಹೊಂದಿದೆ ಮತ್ತು ಅದರ ನಷ್ಟವು ನಕಾರಾತ್ಮಕ ಶಕ್ತಿಗಳನ್ನು ಸೂಚಿಸಬಹುದು. ಆದರೆ, ಚಿನ್ನವನ್ನು ಸರಿಯಾಗಿ ಬಳಸುವುದು ಮುಖ್ಯ. ದೇವರ ಸೇವೆ ಅಥವಾ ಧರ್ಮಕಾರ್ಯಗಳಿಗೆ ಅದನ್ನು ಉಪಯೋಗಿಸುವುದು ಶುಭಕರ. ಚಿನ್ನ ಕಳೆದುಕೊಂಡರೆ ಅಥವಾ ಸಿಕ್ಕರೆ ಅದರ ಅರ್ಥವೇನು ಎಂಬುದರ ಕುರಿತು ವಿಡಿಯೋದಲ್ಲಿ ತಿಳಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​​ 13: ಚಿನ್ನ ಕಳೆದುಕೊಂಡರೆ ಅಥವಾ ಸಿಕ್ಕರೆ ಅದರ ಅರ್ಥವೇನು ಎಂಬುದರ ಕುರಿತು ವಿಡಿಯೋದಲ್ಲಿ ತಿಳಿಸಲಾಗಿದೆ. ಚಿನ್ನದ ಆವಿಷ್ಕಾರ ಅಥವಾ ನಷ್ಟವು ಕೇವಲ ಅದೃಷ್ಟ ಅಥವಾ ದುರದೃಷ್ಟವಲ್ಲ. ಚಿನ್ನವು ಗುರು ಗ್ರಹದೊಂದಿಗೆ ಸಂಬಂಧ ಹೊಂದಿದೆ. ಚಿನ್ನ ಕಳೆದುಹೋಗುವುದು ನಕಾರಾತ್ಮಕ ಶಕ್ತಿಗಳನ್ನು ಸೂಚಿಸುತ್ತದೆ ಮತ್ತು ದೈವಬಲದ ಕೊರತೆಯನ್ನು ಸೂಚಿಸಬಹುದು. ಚಿನ್ನ ಸಿಕ್ಕಾಗ ಅದನ್ನು ವೈಯಕ್ತಿಕ ಲಾಭಕ್ಕಾಗಿ ಬಳಸುವ ಬದಲು, ದೇವಾಲಯಕ್ಕೆ ದಾನ ಮಾಡುವುದು ಅಥವಾ ಧಾರ್ಮಿಕ ಕಾರ್ಯಗಳಿಗೆ ಬಳಸುವುದು ಶುಭಕರ. ಅದನ್ನು ಭದ್ರವಾಗಿ ಇಟ್ಟುಕೊಳ್ಳುವುದು ಸಹ ಮುಖ್ಯ.