ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ ಅಭಿಷೇಕ್​; ಹೇಗಿತ್ತು ಮಂಜು ರಿಯಾಕ್ಷನ್?

Updated on: Jan 01, 2025 | 7:30 PM

ಗೌತಮಿ ಜಾದವ್ ಗಂಡ ಅಭಿಷೇಕ್ ಕಾಸರಗೋಡು ಅವರು ಬಿಗ್ ಬಾಸ್​ ಮನೆಗೆ ಬಂದು ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. ಪತಿ ಬಂದಿದ್ದಕ್ಕೆ ಗೌತಮಿ ಜಾದವ್ ಅವರಿಗೆ ತುಂಬ ಖುಷಿ ಆಗಿದೆ. ಅದಕ್ಕಾಗಿ ಅವರು ಬಿಗ್ ಬಾಸ್​ಗೆ ಧನ್ಯವಾದ ತಿಳಿಸಿದ್ದಾರೆ. ಈ ವಾರದ ಸಂಚಿಕೆಗಳಲ್ಲಿ ಕುಟುಂಬದವರ ಭೇಟಿಗೆ ಅವಕಾಶ ನೀಡಲಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋಗೆ ಗೌತಮಿ ಜಾದವ್ ಅವರ ಪತಿ ಅಭಿಷೇಕ್ ಕಾಸರಗೋಡು ಬಂದಿದ್ದಾರೆ. ಬಿಗ್ ಬಾಸ್​ ಮನೆಯ ಒಳಗೆ ಅವರು ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಈ ಖುಷಿಯ ಕ್ಷಣದಲ್ಲಿ ದೊಡ್ಮನೆ ಸದಸ್ಯರು ಭಾಗಿ ಆಗಿದ್ದಾರೆ. ಈ ಸಂದರ್ಭದಲ್ಲಿ ಉಗ್ರಂ ಮಂಜು ಅವರ ರಿಯಾಕ್ಷನ್​ ಹೇಗಿತ್ತು ಎಂಬುದನ್ನು ತಿಳಿಸುವಂತಹ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More