ಬೆಳಗಾವಿಯಲ್ಲಿ ಆರಂಭಗೊಂಡ ಗೃಹಜ್ಯೋತಿ ಯೋಜನೆ, 200-ಯೂನಿಟ್​ಗಿಂತ ಕಡಿಮೆ ವಿದ್ಯುತ್ ಬಳಸಿದವರಿಗೆ ಸೊನ್ನೆ ಮೊತ್ತದ ಬಿಲ್!

|

Updated on: Aug 01, 2023 | 5:00 PM

ಇನ್ನು ಮುಂದೆ ಪ್ರತಿ ತಿಂಗಳು ರೂ. 450-500 ಉಳಿತಾಯವಾಗುತ್ತದೆ, ಸಿದ್ದರಾಮಯ್ಯ ಸರ್ಕಾರಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಅಂತ ಗೊತ್ತಾಗುತ್ತಿಲ್ಲ ಅಂತ ಗೃಹಿಣಿಯೊಬ್ಬರು ಹೇಳುತ್ತಾರೆ.

ಬೆಳಗಾವಿ: ಸಿದ್ದಾರಾಮಯ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಜ್ಯೋತಿ ಸ್ಕೀಮ್ (Gruha Jyothi scheme) ಬೆಳಗಾವಿ ಜಿಲ್ಲೆಯಲ್ಲಿ ಇಂದಿನಿಂದ ಜಾರಿಗೊಂಡಿದೆ. ಜಿಲ್ಲೆಯಲ್ಲಿ 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದವರಿಗೆ ಶೂನ್ಯ ಮೊತ್ತದ ಬಿಲ್ ಗಳನ್ನು (zero bills) ಹೆಸ್ಕಾಂ ಸಿಬ್ಬಂದಿ (HESCOM staff) ಆಯಾ ಮನೆಗಳಿಗೆ ವಿತರಿಸುತ್ತಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಫಲಾನುಭವಿಗಳಿಗೆ ಬಿಲ್ ನಿಡಲು ಹೆಸ್ಕಾಂ ಬೆಳಗಾವಿ ಶಾಖೆಯೊಂದರ ಹಲವಾರು ಉದ್ಯೋಗಿಗಳು ಬಂದಿದ್ದಾರೆ. ಅವರಲ್ಲೂ ಯೋಜನೆ ಬಗ್ಗೆ ಉತ್ಸುಕತೆ ಇದೆ. ಸೊನ್ನೆ ಮೊತ್ತದ ಬಿಲ್ ಪಡೆದ ಮಹಿಳೆ ತುಂಬಾ ಸಂತೋಷದಲ್ಲಿದ್ದು ಅದನ್ನು ಟಿವಿ9 ಕನ್ನಡ ವಾಹಿನಿಯ ಬೆಳಗಾವಿ ವರದಿಗಾರನೊಂದಿಗೆ ಹಂಚಿಕೊಂಡಿದ್ದಾರೆ. ಸೊನ್ನೆ ಬಿಲ್ ಕಂಡು ಬಹಳ ಸಂತೋಷವಾಗುತ್ತಿದೆ, ಪ್ರತಿ ತಿಂಗಳು ರೂ. 450-500 ಬಿಲ್ ಬರ್ತಾಯಿತ್ತು, ತಮ್ಮ ಕುಟುಂಬಕ್ಕೆ ಅದು ದೊಡ್ಡ ಮೊತ್ತವೇ, ಆ ಹಣ ಇನ್ನು ಮುಂದೆ ಉಳಿತಾಯವಾಗುತ್ತದೆ, ಸಿದ್ದರಾಮಯ್ಯ ಸರ್ಕಾರಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಅಂತ ಗೊತ್ತಾಗುತ್ತಿಲ್ಲ ಅಂತ ಗೃಹಿಣಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 01, 2023 05:00 PM