‘ಪ್ರಜ್ವಲ್​​ಗೆ ಜಿಮ್ ಟ್ರೇನರ್ ಕೊಟ್ಟಿದ್ವಿ, ಆದರೂ ಅಚಿವ್​ ಮಾಡಿಲ್ಲ’; ಗುರುದತ್ ಗಾಣಿಗ

Updated on: Aug 01, 2026 | 1:38 PM

ಕರಾವಳಿ ನಿರ್ದೇಶಕ ಗುರುದತ್ತ ಗಾಣಿಗ, ನಾಯಕ ಪ್ರಜ್ವಲ್ ದೇವರಾಜ್ ಅವರ ದೈಹಿಕ ಬದಲಾವಣೆ ಆಗದೇ ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಡಬ್ಬಿಂಗ್ ಬಗ್ಗೆ ಚರ್ಚಿಸುವಾಗ, ಚಿತ್ರಕ್ಕೆ ಅಗತ್ಯವಿದ್ದ ನಾಯಕನ ರೂಪಾಂತರದ ಬಗ್ಗೆ ಯಾರೂ ಪ್ರಶ್ನಿಸದಿರುವುದು ಅನ್ಯಾಯ ಎಂದಿದ್ದಾರೆ. ಸುದೀಪ್, ಜೂನಿಯರ್ ಎನ್‌ಟಿಆರ್ ಉದಾಹರಣೆ ನೀಡಿ, ಪಾತ್ರಕ್ಕಾಗಿ ನಟರ ಸಮರ್ಪಣೆಯ ಮಹತ್ವ ಒತ್ತಿ ಹೇಳಿದ್ದಾರೆ.

ನಿರ್ದೇಶಕ ಗುರುದತ್ತ ಗಾಣಿಗ ಅವರು ತಮ್ಮ ನಿರ್ದೇನದ ‘ಕರಾವಳಿ’ಯಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ದೈಹಿಕ ಬದಲಾವಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಂಬಳ ಓಟಗಾರನ ಪಾತ್ರಕ್ಕಾಗಿ ಅವರು ದೈಹಿಕವಾಗಿ ರೂಪಾಂತರಗೊಳ್ಳಬೇಕಿತ್ತು, ಆದರೆ ಅದು ಆಗಲಿಲ್ಲ ಎಂದು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಚಿತ್ರತಂಡವು ಹಲವು ತಿಂಗಳುಗಳ ಕಾಲ ಪ್ರಜ್ವಲ್ ದೈಹಿಕ ಬದಲಾವಣೆಗಾಗಿ ಕಾದಿದ್ದೆವು. ಜಿಮ್ ತರಬೇತುದಾರರನ್ನು ಸಹ ಒದಗಿಸಿತ್ತು. ಆದಾಗ್ಯೂ, ಅವರು ಈ ರೂಪಾಂತರವನ್ನು ಸಾಧಿಸಲಿಲ್ಲ. ಈ ಬಗ್ಗೆ ಮಾಧ್ಯಮಗಳು ಅಥವಾ ಉದ್ಯಮದವರು ಪ್ರಶ್ನಿಸದೆ, ಕೇವಲ ಡಬ್ಬಿಂಗ್ ವಿಷಯದ ಬಗ್ಗೆ ಮಾತ್ರ ಗಮನಹರಿಸುತ್ತಿರುವುದಕ್ಕೆ’ ಗಾಣಿಗ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಸುದೀಪ್ ಸರ್ ಅವರಂತಹ ದೊಡ್ಡ ಕಲಾವಿದರನ್ನು ಹತ್ತಿರದಿಂದ ನೋಡಿದ್ದೇನೆ. ಪೈಲ್ವಾನ್ ಚಿತ್ರಕ್ಕಾಗಿ ಅವರು ಎಷ್ಟು ಶ್ರಮವಹಿಸಿದ್ದರು ಎಂಬುದು ನನಗೆ ಗೊತ್ತು. ಜೂನಿಯರ್ ಎನ್‌ಟಿಆರ್ ಸಹ ತಮ್ಮ ಪಾತ್ರಗಳಿಗಾಗಿ ದೇಹವನ್ನು ಬದಲಾಯಿಸಿಕೊಳ್ಳುತ್ತಾರೆ. ಆದರೆ ಇಲ್ಲಿ, ಕಥೆಗೆ ಅನ್ಯಾಯವಾದಾಗ ಯಾರು ಮಾತಾಡುತ್ತಿಲ್ಲ’ ಎಂದು ಗುರುದತ್ತ ಗಾಣಿಗ ಹೇಳಿದ್ದಾರೆ. ಚಿತ್ರಕ್ಕಾಗಿ ನಟರು ಶಿಸ್ತು ಮತ್ತು ಸಮರ್ಪಣೆಯನ್ನು ತೋರಿಸುವುದು ಅತಿ ಮುಖ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us