Hasanamba Temple: ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಜನ ಸಾಗರ

Edited By: ಆಯೇಷಾ ಬಾನು

Updated on: Nov 04, 2023 | 1:49 PM

ಇಂದು ಬೆಳಿಗ್ಗೆ 5 ಗಂಟೆಯಿಂದಲೇ ದರ್ಶನ ಆರಂಭವಾಗಿದ್ದು ವೀಕೆಂಡ್ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕಿಲೋ ಮೀಟರ್​ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಇಂದಿನಿಂದ ದಿನದ 24 ಗಂಟೆಯೂ ಹಾಸನಾಂಬೆ ದರ್ಶನ ಇರಲಿದೆ.

ಹಾಸನ, ನ.04: ವರ್ಷಕ್ಕೊಮ್ಮೆ ದರ್ಶನ ಕರುಣಿಸೋ ಹಾಸನದ ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನೋತ್ಸವದ ಎರಡನೇ ದಿನವೂ ಶಕ್ತಿದೇವತೆಯನ್ನ ಕಣ್ತುಂಬಿಕೊಳ್ಳಳು ಜನ ಸಾಗರವೇ ಹರಿದು ಬಂದಿದೆ. ಇಂದು ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಗಂಟೆಗಳ ಗಟ್ಟಲೆ ಕಾಯ್ದು ಸರ್ವಾಲಂಕಾರ ಭೂಷಿತೆಯಾದ ಹಾಸನಾಂಬೆಯನ್ನ ಕಣ್ತುಂಬಿಕೊಂಡ ಭಕ್ತರು ಪುನೀತರಾಗುತ್ತಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಯಿಂದಲೇ ದರ್ಶನ ಆರಂಭವಾಗಿದ್ದು ವೀಕೆಂಡ್ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕಿಲೋ ಮೀಟರ್​ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಇಂದಿನಿಂದ ದಿನದ 24 ಗಂಟೆಯೂ ಹಾಸನಾಂಬೆ ದರ್ಶನ ಇರಲಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More