ಹಾಸನ, ನ.11: ಹಾಸನಾಂಬೆ ದೇವಾಲಯ(Hasanamba Temple)ಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ನೂಕು ನುಗ್ಗಲು ಉಂಟಾಗಿದೆ. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರೆ, ಪೊಲೀಸರನ್ನೇ ತಳ್ಳಿ ಸಾವಿರಾರು ಭಕ್ತರು ಒಳ ನುಗ್ಗುತ್ತಿದ್ದಾರೆ. ಇತ್ತ ವಿವಿಐಪಿ, ವಿಐಪಿ ಸರತಿ ಸಾಲಿನಲ್ಲಿಯೂ ನೂಕು ನುಗ್ಗಲು ಉಂಟಾಗಿದೆ. ಜನರ ತಳ್ಳಾಟದ ಮಧ್ಯೆ ಹಾಸನ ಎಸ್ಪಿ ಮೊಹಮದ್ ಸುಜೀತ ಸಿಲುಕಿದ್ದು, ಅವರನ್ನು ತಳ್ಳಿಕೊಂಡು ಜನ ಒಳ ನುಗ್ಗಿದ್ದಾರೆ. ಎಸ್ಪಿಯನ್ನ ಹೊರ ಕರೆತರಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುವಂತಾಗಿತ್ತು. ಈ ಮೂಲಕ ಹಾಸನಾಂಬ ದೇವಾಲಯ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ