ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದ ಸಹಕಾರ ಸಚಿವನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ

Updated on: Sep 25, 2023 | 6:04 PM

ಅವನು ಋಣ ತೀರಿಸುವ ಅಗತ್ಯವಿಲ್ಲ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸದ್ದ ದೇವೇಗೌಡರಿಗೆ ಇವರೆಲ್ಲ ಹೇಗೆ ಋಣ ತೀರಿಸಿದರು ಅಂತ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದ ಅವನಿಗೆ ದುರಹಂಕಾರ ತಲೆಗೇರಿದೆ, ಆದರೆ ಕಾಲ ಒಂದೇ ತೆರನಾಗಿರಲ್ಲ, ದೇವೇಗೌಡರ ಮಕ್ಕಳು ಇನ್ನು ಬದುಕಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಬೆಂಗಳೂರು: ಬೆಂಗಳೂರಲ್ಲಿ ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು (HD Devegowda) ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಸಹಕಾರ ಸಚಿವ ಕೆಎನ್ ರಾಜಣ್ಣರನ್ನು (KN Rajanna) ತರಾಟೆಗೆ ತೆಗೆದುಕೊಂಡರು. ವಿಧಾನಸಭಾ ಚುನಾವಣೆಯ ವೇಳೆ ರಾಜಣ್ಣ, ದೇವೇಗೌಡರ ಬಗ್ಗೆ ಹಗುರವಾಗಿ ಮಾತಾಡಿದ್ದರು. ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅವರ ಋಣ ತಮ್ಮ ಮೇಲಿದೆ ಅದನ್ನು ತೀರಿಸಬೇಕು ಎಂದು ರಾಜಣ್ಣ ವ್ಯಂಗ್ಯವಾಗಿ ಮಾತಾಡಿದ್ದರು. ಅದನ್ನು ನೆನಪಿಸಿಕೊಂಡ ಕುಮಾರಸ್ವಾಮಿ ರಾಜಣ್ಣ ವಿರುದ್ಧ ಏಕವಚನದಲ್ಲಿ ರೇಗಾಡಿದರು, 2004 ರ ಚುನಾವಣೆಯಲ್ಲಿ ದೇವೇಗೌಡರಿಗೆ ಮೈಯಲ್ಲಿ ಹುಷಾರಿಲ್ಲದಿದ್ದರೂ ಕೊನೆಯ ದಿನ ಅವನ ಪರವಾಗಿ ಪ್ರಚಾರ ಮಾಡಿ 700 ವೋಟುಗಳಿಂದ ಗೆಲ್ಲಿಸಿದ್ದರು. ಅವನು ಋಣ ತೀರಿಸುವ ಅಗತ್ಯವಿಲ್ಲ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸದ್ದ ದೇವೇಗೌಡರಿಗೆ ಇವರೆಲ್ಲ ಹೇಗೆ ಋಣ ತೀರಿಸಿದರು ಅಂತ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಹೆಸರು ಹೇಳಿಕೊಂಡು ಬೆಳೆದ ಅವನಿಗೆ ದುರಹಂಕಾರ ತಲೆಗೇರಿದೆ, ಆದರೆ ಕಾಲ ಒಂದೇ ತೆರನಾಗಿರಲ್ಲ, ದೇವೇಗೌಡರ ಮಕ್ಕಳು ಇನ್ನು ಬದುಕಿದ್ದಾರೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More