ಮಗಳ ಪ್ರಾಣ ಕಾಪಾಡಿದ ಅಪ್ಪ: ತಂದೆ-ಮಗಳ ಹೃದಯಸ್ಪರ್ಶಿ ವಿಡಿಯೋ ವೈರಲ್
ಅಪ್ಪ ಎಂದರೆ ಹೆಣ್ಣುಮಕ್ಕಳಿಗೆ ನಿಜವಾದ ಹೀರೋ. ಈ ವಿಡಿಯೋದಲ್ಲಿ, ರೈಲು ಬರುತ್ತಿದ್ದಾಗ ಹಳಿಯ ಮೇಲೆ ಬಿದ್ದ ಮಗಳನ್ನು ತಕ್ಷಣವೇ ತಬ್ಬಿಕೊಂಡು, ಅಪಾಯದಿಂದ ಕಾಪಾಡಿದ ಅಪ್ಪನ ಧೈರ್ಯ ಮತ್ತು ಪ್ರೀತಿ ಹೃದಯ ಸ್ಪರ್ಶಿಯಾಗಿದೆ. ಮಗಳ ಪ್ರಾಣ ಉಳಿಸಲು ತನ್ನ ಪ್ರಾಣವನ್ನೂ ಲೆಕ್ಕಿಸದೆ ಅಪ್ಪ ತೋರಿದ ಸಾಹಸ, ತಂದೆ-ಮಗಳ ಅವಿನಾಭಾವ ಸಂಬಂಧಕ್ಕೆ ಕನ್ನಡಿಯಾಗಿದೆ. ಅಪ್ಪನ ತ್ಯಾಗ, ಮಗಳಿಗೆ ಸುರಕ್ಷೆ.
ಅಪ್ಪ ಎಂದರೆ ಎಲ್ಲ ಹೆಣ್ಮಕ್ಕಳಿಗೆ ಆಕಾಶದಂತೆ, ಅಷ್ಟು ಎತ್ತರದಲ್ಲಿ ಅಪ್ಪನನ್ನು ಇಟ್ಟಿರುತ್ತಾರೆ. ಅಪ್ಪ ಕೂಡ ಅಷ್ಟೇ ಮಗಳೆಂದರೆ ಪಂಚಪ್ರಾಣ, ಯಾಕೋ ಗೊತ್ತಿಲ್ಲ ಈ ಅಪ್ಪಂದಿರಿಗೆ ಮಗಳು ಅಂದ್ರೆ ಯಾಕೆ ಅಷ್ಟೊಂದು ಪ್ರೀತಿ ಎಂದು, ಇನ್ನು ಪ್ರತಿಯೊಬ್ಬ ಮಗಳಿಗೆ ತನ್ನ ಜೀವನದಲ್ಲಿ ಅಪ್ಪನೇ ಹೀರೋ ಎಂಬುದು ಹಲವು ಬಾರಿ ಸಾಬೀತಾಗಿದೆ. ಇದೀಗ ಇಲ್ಲೊಂದು ವಿಡಿಯೋ ಕೂಡ ಅಪ್ಪನೇ ನಿಜವಾದ ಹೀರೋ ಎಂಬುದನ್ನು ತೋರಿಸಿಕೊಟ್ಟಿದೆ. ಈ ವಿಡಿಯೋದಲ್ಲಿ ರೈಲು ಬರುವ ವೇಳೆ ಮಗಳು ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದ್ದಿದ್ದಾಳೆ. ಏನ್ ಮಾಡಬೇಕು ಎಂದು ದಿಕ್ಕೇ ತೋಚದ ತಂದೆ, ತಕ್ಷಣ ಮಗಳನ್ನು ಕಾಪಾಡಲು ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ಮಗಳನ್ನು ತಬ್ಬಿಕೊಂಡು ಮಲಗಿದ್ದಾರೆ. ಮಗಳಿಗೆ ಒಂದು ಚೂರು ತೊಂದರೆಯಾಗದಂತೆ ಕಾಪಾಡಿದ್ದಾರೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 07, 2025 05:16 PM