Horoscope Today: ಇಂದು ಬಲಿಪಾಡ್ಯಮಿ ಮತ್ತು ಗೋವರ್ಧನ ಪೂಜೆಗೆ ವಿಶೇಷ ಕಾಲ

Updated on: Nov 10, 2026 | 6:38 AM

ನವೆಂಬರ್ 10, ಮಂಗಳವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ನವೆಂಬರ್ 10, ಮಂಗಳವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ ದಕ್ಷಿಣಾಯನ ಕಾರ್ತಿಕ ಮಾಸ ಶರದೃತು ಶುಕ್ಲಪಕ್ಷ ಪಾಡ್ಯ, ವಿಶಾಖಾ ನಕ್ಷತ್ರ, ಶೋಭನ ಯೋಗ, ಭವಕರಣ ಇರಲಿದೆ.

ಇಂದು ಬಲಿಪಾಡ್ಯಮಿ ಮತ್ತು ಗೋವರ್ಧನ ಪೂಜೆಗೆ ವಿಶೇಷ ಕಾಲವಾಗಿದೆ. ಅಲ್ಲದೆ, ಉತ್ತರ ಕರ್ನಾಟಕದ ಕಡೆ ಉಳುವಿ ಚನ್ನಬಸವೇಶ್ವರ ಸ್ವಾಮಿಗಳ ಜಯಂತ್ಯೋತ್ಸವವನ್ನೂ ಆಚರಿಸಲಾಗುತ್ತದೆ. ಈ ದಿನ ತಮೋಗುಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದ್ದು, ಕಾಮಧೇನು ಪೂಜೆ ಮತ್ತು ಗೋವುಗಳ ದರ್ಶನ ಶುಭಕರ. ರವಿ ತುಲಾ ರಾಶಿಯಲ್ಲಿ, ಚಂದ್ರ ವೃಶ್ಚಿಕ ರಾಶಿಯ ವಿಶಾಖಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ.

ಮೇಷ ರಾಶಿಯವರಿಗೆ ನಾಲ್ಕು ಗ್ರಹಗಳ ಶುಭಫಲ ಇರಲಿದ್ದು, ಹಳೆಯ ಕೆಲಸಗಳು ಪರಿಪೂರ್ಣಗೊಳ್ಳುತ್ತವೆ. ಆರ್ಥಿಕವಾಗಿ ಮತ್ತು ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಇರುತ್ತದೆ. ವೃಷಭ ರಾಶಿಯವರಿಗೆ ಸಾಲ ತೀರಿಸುವ ಯೋಗ, ಆಕಸ್ಮಿಕ ಧನಲಾಭ ಸಾಧ್ಯತೆ ಇದೆ. ಮಿಥುನ ರಾಶಿಯವರು ಆತುರತೆ ಬೇಡ. ಆದಾಯದಲ್ಲಿ ಏರಿಕೆ ಜೊತೆಗೆ ಖರ್ಚುಗಳು ಕೂಡ ಇರಲಿವೆ. ಕರ್ಕಾಟಕ ರಾಶಿಯವರಿಗೆ ಅತಿಯಾದ ಆದಾಯ, ವ್ಯಾಪಾರದಲ್ಲಿ ಲಾಭ, ದೈವಾನುಗ್ರಹ ಇರುತ್ತದೆ. ಸಿಂಹ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಕಠಿಣ ಸಮಸ್ಯೆಗಳಿಗೆ ಪರಿಹಾರ, ಹಳೆ ಬಾಕಿ ವಸೂಲಿ ಆಗುವ ಯೋಗವಿದೆ. ಕನ್ಯಾ ರಾಶಿಯವರಿಗೆ ಮಾತಿನಲ್ಲಿ ಮೃದುತ್ವ, ಪ್ರಯಾಣಗಳಿಂದ ಲಾಭ, ಮಕ್ಕಳಿಂದ ಶುಭ ಇರುತ್ತದೆ. ಪ್ರತಿಯೊಂದು ರಾಶಿಗೂ ಅನುಗುಣವಾಗಿ ಅದೃಷ್ಟದ ಬಣ್ಣ, ಸಂಖ್ಯೆ, ದಿಕ್ಕು ಮತ್ತು ಮಂತ್ರಗಳನ್ನು ಗುರೂಜಿ ತಿಳಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More