Horoscope Today: ಇಂದು ಈ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಲಾಭ
ಅಕ್ಟೋಬರ್ 09, ಶುಕ್ರವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಅಕ್ಟೋಬರ್ 09, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವ ನಾಮ ಸಂವತ್ಸರದ, ದಕ್ಷಿಣಾಯಣ, ಭಾದ್ರಪದ ಮಾಸದ, ಕೃಷ್ಣಪಕ್ಷ ಚತುರ್ದಶಿ, ಉತ್ತರಾ ನಕ್ಷತ್ರ, ಬ್ರಹ್ಮ ಯೋಗ, ಭದ್ರಕರಣ ಇರತಕ್ಕಂತ ಈ ದಿನದ ಕುರಿತು ವಿವರಿಸಲಾಗಿದೆ.
ಪ್ರಮುಖವಾಗಿ, ಇಂದು ಘಾತ ಚತುರ್ದಶಿ, ಹುಳಿಯಾಳ ಶಂಭುಲಿಂಗ ಸ್ವಾಮಿಗಳ ಪುಣ್ಯದಿನ ಹಾಗೂ ವಿಶ್ವ ಅಂಚೆ ದಿನವೂ ಹೌದು. ರವಿ ಕನ್ಯಾ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿರುವುದಾಗಿ ಗುರೂಜಿ ತಿಳಿಸಿದ್ದಾರೆ. ಈ ದಿನದ ರಾಹುಕಾಲ ಬೆಳಿಗ್ಗೆ 10:36 ರಿಂದ ಮಧ್ಯಾಹ್ನ 12:06 ರವರೆಗೆ ಇರಲಿದೆ. ಶುಭಕಾಲವು ಮಧ್ಯಾಹ್ನ 12:06 ರಿಂದ 01:36 ರವರೆಗೆ ಇರುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
