ವಿರೋಧ ಪಕ್ಷದ ನಾಯಕ ಯಾರಾದರೇನು; ಅದರಿಂದ ನಮಗೇನಾಗಬೇಕಿದೆ? ಸಿದ್ದರಾಮಯ್ಯ, ಮುಖ್ಯಮಂತ್ರಿ

ಅರುಣ್​ ಕುಮಾರ್​ ಬೆಳ್ಳಿ

Updated on: Nov 18, 2023 | 12:55 PM

ರಾಜ್ಯದ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಅಂತ ಅಶೋಕ ಹೇಳಿದ್ದಾರೆ ಅಂತ ಪತ್ರಕರ್ತರು ಹೇಳಿದಾಗ, ಅವರು ಹೇಳಿದ್ದನ್ನು ತನಗ್ಯಾಕೆ ಹೇಳುತ್ತಿರೋದು? ತನಗೆ ತಿಳಿಸುವಂತೆ ಅವರು ಹೇಳಿದ್ದಾರಾ ಎಂದ ಮುಖ್ಯಮಂತ್ರಿ, ಅವರೇನೇ ಕೇಳಿದರೂ ಅಸೆಂಬ್ಲಿಯಲ್ಲಿ ಉತ್ತರ ನೀಡುತ್ತೇವೆ ಅಂದರು.

ಮೈಸೂರು: ಒಬ್ಬ ವಿರೋಧ ಪಕ್ಷ ನಾಯಕನನ್ನು (Leader of Opposition) ಅಯ್ಕೆ ಮಾಡಿಕೊಳ್ಳುವ ಯೋಗ್ಯತೆ ಇಲ್ಲ ಅಂತ ಬಿಜೆಪಿ ನಾಯಕರನ್ನು ಗೇಲಿ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಇಂದು ಪತ್ರಕರ್ತರು, ಆರ್ ಅಶೋಕರನ್ನು (R Ashoka) ಆಯ್ಕೆ ಮಾಡಲಾಗಿದೆ ಅಂತ ಹೇಳಿದಾಗ ಪ್ರತಿಕ್ರಿಯಿಸಲು ತಡವರಿಸಿದರು. ಬಿಜೆಪಿ ಪಾರ್ಟಿಯವರು ಯಾರನ್ನಾದರೂ ಅಯ್ಕೆ ಮಾಡಿಕೊಳ್ಳಲಿ, ಅದರಿಂದ ತಮಗೇನು ಅಂತ ಹೇಳಿದರು. ವಿಷಯಾಂತರ ಮಾಡಿ ಮಾತಾಡಿದ ಸಿದ್ದರಾಮಯ್ಯ, ಸರ್ಕಾರ ನಡೆಸಲು ಜನ ನಮಗೆ ಆಶೀರ್ವಾದ ನೀಡಿದ್ದಾರೆ, ನಾವು ಅವರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ, ರಾಜ್ಯದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುವೆಡೆ ನಮ್ಮ ಗಮನ ಕೇಂದ್ರೀಕೃತವಾಗಿದೆ ಎಂದು ಹೇಳಿದರು. ರಾಜ್ಯದ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಅಂತ ಅಶೋಕ ಹೇಳಿದ್ದಾರೆ ಅಂತ ಪತ್ರಕರ್ತರು ಹೇಳಿದಾಗ, ಅವರು ಹೇಳಿದ್ದನ್ನು ತನಗ್ಯಾಕೆ ಹೇಳುತ್ತಿರೋದು? ತನಗೆ ತಿಳಿಸುವಂತೆ ಅವರು ಹೇಳಿದ್ದಾರಾ ಎಂದ ಮುಖ್ಯಮಂತ್ರಿ, ಅವರೇನೇ ಕೇಳಿದರೂ ಅಸೆಂಬ್ಲಿಯಲ್ಲಿ ಉತ್ತರ ನೀಡುತ್ತೇವೆ ಅಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.