‘ನನ್ನ ಸಕ್ಸಸ್​ಗೆ ದರ್ಶನ್ ಕಾರಣ’; ಬಿಗ್ ಬಾಸ್​ ರಘು ಮಾತು

Updated on: Oct 21, 2025 | 1:04 PM

ಬಿಗ್ ಬಾಸ್ ಮನೆಗೆ ಕಾಲಿಟ್ಟ ಅನೇಕರು ಮಿಂಚುತ್ತಾರೆ. ಸುದೀಪ್ ಬಗ್ಗೆ ಹೊಗಳುವ ಕೆಲಸ ಮಾಡುತ್ತಾರೆ. ಆದರೆ, ರಘು ಆ ರೀತಿ ಅಲ್ಲ. ಅವರು ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಸಕ್ಸಸ್​ಗೆ ದರ್ಶನ್ ಕಾರಣ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ.

ಜಿಮ್ ಟ್ರೇನರ್ ಆಗಿ ಗಮನ ಸೆಳೆದ ರಘು (Raghu) ಅವರು ‘ಕ್ವಾಟ್ಲೆ ಕಿಚನ್’ ವಿನ್ನರ್ ಆದರು. ಆ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಮೂಲಕ ಒಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಘು ಅವರು ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಒಳಗೆ ಹೋಗ್ತಾ ಇದೀನಿ. ದರ್ಶನ್ ಅವರು ಇದ್ದಿದ್ರೆ ಖುಷಿ ಪಡ್ತಾ ಇದ್ರು. ಅವರನ್ನು ತುಂಬಾ ಮಿಸ್ ಮಾಡ್ಕೋತಾ ಇದೀನಿ. ನನ್ನ ಸಕ್ಸಸ್​ಗೆ ಅವರೂ ಕಾರಣ. ನಾನು ಯಾರು ಅಂತ ಜನರಿಗೆ ಗೊತ್ತಿರಲಿಲ್ಲ. ಆದರೂ ನನ್ನ ಜಿಮ್ ಉದ್ಘಾಟಿಸಿದರು. ಅವರ ಸಿನಿಮಾದಲ್ಲಿ ಚಾನ್ಸ್ ಕೊಟ್ಟರು. ನನ್ನ ಸಕ್ಸಸ್​ನಲ್ಲಿ ಅವರು ಯಾವಾಗಲೂ ಇದಾರೆ’ ಎಂದಿದ್ದಾರೆ ರಘು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More