Video: ಮಹಿಳೆಯ ಎದೆ ಮುಟ್ಟಿ ಡೆಲಿವರಿ ಬಾಯ್​ನಿಂದ ಅನುಚಿತ ವರ್ತನೆ

Updated on: Oct 05, 2025 | 10:06 AM

ಮಹಿಳೆಯ ಎದೆ ಮುಟ್ಟಿ ಡೆಲಿವರಿ ಬಾಯ್​ ಒಬ್ಬ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಕ್ಸ್​​ನಲ್ಲಿ ಎಟರ್ನಲ್ ಎಕ್ಸ್​ಫ್ಲೇಮ್ಸ್​ ಎನ್ನುವ ಖಾತೆಯಿಂದ ಈ ವಿಡಿಯೋ ಅಪ್​ಲೋಡ್ ಆಗಿದೆ. ಆದರೆ ಎಲ್ಲಿ ನಡೆದಿರುವ ಎನ್ನುವ ಮಾಹಿತಿಯನ್ನು ಇವರು ನೀಡಿಲ್ಲ. ಡೆಲಿವರಿಗೆಂದು ಬಂದ ವ್ಯಕ್ತಿ ಪಾರ್ಸೆಲ್ ನೀಡಲು ಬಂದವನು ಒಂದು ಕೈಯಲ್ಲಿ ಹಣ ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಪಾರ್ಸೆಲ್ ಕೊಡುವಾಗ ಮಹಿಳೆಯ ಎದೆ ಮುಟ್ಟಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದೆ. ಮಹಿಳೆ ದೂರು ದಾಖಲಿಸಿಲ್ಲ.ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಬ್ಲಿಂಕಿಟ್ ಆತನನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.

ಮಹಿಳೆಯ ಎದೆ ಮುಟ್ಟಿ ಡೆಲಿವರಿ ಬಾಯ್​ ಒಬ್ಬ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಕ್ಸ್​​ನಲ್ಲಿ ಎಟರ್ನಲ್ ಎಕ್ಸ್​ಫ್ಲೇಮ್ಸ್​ ಎನ್ನುವ ಖಾತೆಯಿಂದ ಈ ವಿಡಿಯೋ ಅಪ್​ಲೋಡ್ ಆಗಿದೆ. ಆದರೆ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿಯನ್ನು ಇವರು ನೀಡಿಲ್ಲ.  ಪಾರ್ಸೆಲ್ ನೀಡಲು ಬಂದವನು ಒಂದು ಕೈಯಲ್ಲಿ ಹಣ ತೆಗೆದುಕೊಂಡು ಮತ್ತೊಂದು ಕೈಯಲ್ಲಿ ಪಾರ್ಸೆಲ್ ಕೊಡುವಾಗ ಮಹಿಳೆಯ ಎದೆ ಮುಟ್ಟಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದೆ. ಮಹಿಳೆ ದೂರು ದಾಖಲಿಸಿಲ್ಲ.ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಬ್ಲಿಂಕಿಟ್ ಆತನನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ