ಸಮಾಜ ಒಡೆಯುವ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪರಿಂದ ನನಗೆ ಜೀವ ಬೆದರಿಕೆ ಇದೆ: ಪ್ರಣವಾನಂದ್ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ

Updated on: Sep 16, 2023 | 5:06 PM

ತಾನ್ಯಾವತ್ತಾದರೂ ಹೆಂಡತಿ ಮಗುವನ್ನು ಕರೆದುಕೊಂಡು ಸಚಿವರ ಮನೆಗೆ ಹೋಗಿದ್ದೀನಾ ಅಂತ ಕೇಳುವ ಸ್ವಾಮೀಜಿ ಮೂರು ಸಲ ಹೋದಾಗ ಅವರೇನು ಮಾಡಿದರು ಅಂತ ಅವರಿಗೆ ಗೊತ್ತಿದೆ ಅನ್ನುತ್ತಾರೆ! ಮಧು ಬಂಗಾರಪ್ಪರನ್ನು ಕಾಂಗ್ರೆಸ್ ಹದ್ದುಬಸ್ತಿನಲ್ಲಿಡದಿದ್ದರೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳುವ ಸ್ವಾಮೀಜಿ, ಸಚಿವರು ಸಮಾಜ ಒಡೆಯುವ ಕೆಲಸ ಮಾಡಬಾರದು ಅನ್ನುತ್ತಾರೆ.

ಬೆಂಗಳೂರು: ಈಡಿಗ ಸಮುದಾಯದ ಪ್ರಣವಾನಂದ್ ಸ್ವಾಮೀಜಿ (Pranavananda Swamiji) ತಮ್ಮ ಸಮುದಾಯದವರೇ ಆಗಿರುವ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ವಿರುದ್ಧ ಕೆಂಡಕಾರಿದ್ದಾರೆ. ಸ್ವಾಮೀಜಿ ಮತ್ತು ಸಚಿವರ ನಡುವೆ ಪರಸ್ಪರ ದೋಷಾರೋಪಣೆ ಜಾರಿಯಲ್ಲಿದೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸ್ವಾಮೀಜ, ಮಧು ಬಂಗಾರಪ್ಪರಿಂದ ತನಗ ಜೀವ ಬೆದರಿಕೆ (life threat) ಇದ್ದು ನಗರ ಪೊಲೀಸ್ ಅಯುಕ್ತರೊಂದಿಗೆ ದೂರು ದಾಖಲಿಸುವುದಾಗಿ ಹೇಳಿದರು. ತಾನು ಮದುವೆಯಾಗಿರುವುಸ ಸಚಿವರಿಗೆ ಯಾಕೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದ ಅವರುಮ ಅಣ್ಣ ಬಸವಣ್ಣ, ಸಪ್ತಋಷಿ, ವೇದವ್ಯಾಸರ-ಮೊದಲಾದವರೆಲ್ಲ ಮದುವೆ ಮಾಡಿಕೊಂಡಿದ್ದರು ಎಂದು ಹೇಳುತ್ತಾ ತಮ್ಮ ಮದುವೆಯನ್ನು ಸಮರ್ಥನೆ ಮಾಡಿಕೊಂಡರು. ತಾನ್ಯಾವತ್ತಾದರೂ ಹೆಂಡತಿ ಮಗುವನ್ನು ಕರೆದುಕೊಂಡು ಸಚಿವರ ಮನೆಗೆ ಹೋಗಿದ್ದೀನಾ ಅಂತ ಕೇಳುವ ಸ್ವಾಮೀಜಿ ಮೂರು ಸಲ ಹೋದಾಗ ಅವರೇನು ಮಾಡಿದರು ಅಂತ ಅವರಿಗೆ ಗೊತ್ತಿದೆ ಅನ್ನುತ್ತಾರೆ! ಮಧು ಬಂಗಾರಪ್ಪರನ್ನು ಕಾಂಗ್ರೆಸ್ ಹದ್ದುಬಸ್ತಿನಲ್ಲಿಡದಿದ್ದರೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳುವ ಸ್ವಾಮೀಜಿ, ಸಚಿವರು ಸಮಾಜ ಒಡೆಯುವ ಕೆಲಸ ಮಾಡಬಾರದು ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.