ಸಿದ್ದರಾಮಯ್ಯ ಮುಂದಿನ ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲಿ ಎಂದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್!
ರಾಯಚೂರು ನಗರದ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ ಮುಂದಿನ ಹತ್ತು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಲಿ ಅಂತ ಹೇಳಿ ನೆರೆದಿದ್ದ ಜನರ ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸುತ್ತಾರೆ. ನಗರದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾಡಿದರು.
ರಾಯಚೂರು: ಬಿಜೆಪಿ ಶಾಸಕರಿಗೆ ಹೈಕಮಾಂಡ್ ಬಗ್ಗೆ ಭಯವಿದ್ದಂತಿಲ್ಲ. ಸಾರ್ವಜನಿಕ ಸಭೆಯೊಂದರಲ್ಲಿ (public programmes) ಪಕ್ಷದ ಒಬ್ಬ ಶಾಸಕ ಇಷ್ಟು ನಿರ್ಭೀತಿಯಿಂದ ಇಂಥ ಘೋಷಣೆಗಳನ್ನು ಮಾಡುವುದೇ! ತಮ್ಮ ಪಕ್ಷದ ನಾಯಕರ ಬಗ್ಗೆ ಅವರು ಮಾತಾಡಿದ್ದರೆ ಓಕೆ, ಸಮಸ್ಯೆ ಅನಿಸುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮೆಚ್ಚಿ ಮಾತಾಡುವುದಲ್ಲದೆ ಅವರೇ 10 ವರ್ಷ ಗಳ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಅಂತ ಹೇಳಿದರೆ ಹೇಗೆ ಮಾರಾಯ್ರೇ? ಇವತ್ತು ರಾಯಚೂರು ನಗರದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ರಾಯಚೂರು ನಗರದ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ (Dr Shivaraj Patil), ಮುಂದಿನ ಹತ್ತು ವರ್ಷಗಳ ಕಾಲ ಸಿದ್ದರಾಮಯ್ಯನವರೇ (Siddaramaiah) ಮುಖ್ಯಮಂತ್ರಿಯಾಗಿರಲಿ ಅಂತ ಹೇಳಿ ನೆರೆದಿದ್ದ ಜನರ ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸುತ್ತಾರೆ. ಹಿಂದೆ ದೇವರಾಜ ಅರಸು ಸಾಹೇಬರು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು, ಸಿದ್ದರಾಮಯ್ಯನವರು ಹತ್ತು ವರ್ಷಗಳ ಕಾಲ ರಾಜ್ಯವಾಳಲಿ ಅನ್ನುತ್ತಾರೆ. ಅವರು ಮುಖ್ಯಮಂತ್ರಿಯಾಗಿರುವವರೆಗೆ ಕುರುಬ ಸಮಾಜಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ