ವಿಜಯಪುರ: ಮೊಹರಂ ನಿಮಿತ್ತ ಕೆಂಡದಲ್ಲಿ‌ ಕಂಬಳಿ‌ ಹಾಸಿ‌ ಕುಳಿತ ವ್ಯಕ್ತಿ; ವಿಡಿಯೋ ವೈರಲ್

Edited By: ಕಿರಣ್ ಹನುಮಂತ್​ ಮಾದಾರ್

Updated on: Jul 29, 2023 | 2:57 PM

ರಾಜ್ಯಾದ್ಯಂತ ಇಂದು(ಜು.29) ಮೊಹರಂ ಸಂಭ್ರಮ ಮನೆ ಮಾಡಿದ್ದು, ಅದರಂತೆ ವಿಜಯಪುರ ‌ಜಿಲ್ಲೆ‌‌ ಮುದ್ದೇಬಿಹಾಳ ತಾಲೂಕಿನ ಅಮರಗೋಳ‌‌ ಗ್ರಾಮದಲ್ಲಿಯೂ ಮೊಹರಂ ಅದ್ದೂರಿಯಾಗಿ ನಡೆದಿದೆ. ಈ ವೇಳೆ ಅಲಾಯಿ‌‌ ದೇವರ ಎದುರುಗೆ ಹಾಕಿದ‌‌‌ ಕೆಂಡದಲ್ಲಿ‌ ಕುಳಿತು ವ್ಯಕ್ತಯೊರ್ವ ಭಕ್ತಿ ಪರಾಕಾಷ್ಠೆ ಮೆರೆದಿದ್ದಾನೆ.

ವಿಜಯಪುರ, ಜು.29: ರಾಜ್ಯಾದ್ಯಂತ ಇಂದು(ಜು.29) ಮೊಹರಂ(Muḥarram) ಸಂಭ್ರಮ ಮನೆ ಮಾಡಿದ್ದು, ಅದರಂತೆ ವಿಜಯಪುರ ‌ಜಿಲ್ಲೆ‌‌ ಮುದ್ದೇಬಿಹಾಳ ತಾಲೂಕಿನ ಅಮರಗೋಳ‌‌ ಗ್ರಾಮದಲ್ಲಿಯೂ ಮೊಹರಂ ಅದ್ದೂರಿಯಾಗಿ ನಡೆದಿದೆ. ಮೊಹರಂ ನಿಮಿತ್ತ ಇಂದು‌ ನಸುಕಿನ ಜನ ಜಾವ ಗ್ರಾಮದ ಅಲಾಯಿ‌‌ ದೇವರ ಎದುರುಗೆ ಹಾಕಿದ‌‌‌ ಕೆಂಡದಲ್ಲಿ‌ ಯಲ್ಲಾಲಿಂಗ ಹಿರೇಹಾಳ ಎಂಬ ವ್ಯಕ್ತಿ ಕಂಬಳಿ‌ ಹಾಸಿ‌ ಕುಳಿತು, ಕೆಲ ಕ್ಷಣ‌ ಭಕ್ತಿ ಸಮರ್ಪಣೆ ಮಾಡಿ, ಬಳಿಕ ಬರಿಗೈಯಲ್ಲಿ ಕೆಂಡ‌ ತುಂಬಿ ಕೆಂಡದಾರತಿ‌ ಮಾಡಿದ ಘಟನೆ ನಡೆದಿದೆ. ಯಲ್ಲಾಲಿಂಗ ಅವರ ಭಕ್ತಿ ಪರಾಕಾಷ್ಟೆಗೆ ಗ್ರಾಮದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಬೆಂಕಿ ಮೇಲೆ‌ ಕುಳಿತರೂ, ಕೈಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿ ಅವರಿಗೆ ಯಾವುದೇ ಸುಟ್ಟ ಗಾಯವಾಗಿಲ್ಲ. ಇದು ಅಲಾಯಿ ದೇವರ ಪವಾಡವೆಂದು‌ ಜನರು ಹೇಳುತ್ತಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 29, 2023 02:10 PM
Loading...
Unable to load recommendations.
Follow Us
ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More