ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದ ರಾಷ್ಟ್ರ ಪಕ್ಷಿ ನವಿಲು; ವಿಡಿಯೋ ವೈರಲ್​

|

Updated on: Aug 28, 2024 | 6:22 PM

ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಕೆರೂರು ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣಕ್ಕೆ ಇಂದು ರಾಷ್ಟ್ರ ಪಕ್ಷಿ ಆಗಮಿಸಿತ್ತು. ಶಾಲಾ ಆವರಣದಲ್ಲಿ ಓಡಾಡಿ ತರಗತಿಗಳಿ ಬಳಿ ಸುಳಿದಾಡಿತ್ತು. ಬಳಿಕ ಮಧ್ಯಾಹ್ನ ಅಕ್ಷರ ದಾಸೋಹ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಬಿಸಿ ಊಟವನ್ನು ಸವಿದು ಖುಷಿ ಪಟ್ಟಿತು.

ವಿಜಯಪುರ, ಆ.28: ರಾಷ್ಟ್ರೀಯ ಪಕ್ಷಿ ನವಿಲೊಂದು ಇಂದು(ಬುಧವಾರ) ಸರ್ಕಾರಿ ಶಾಲೆಗೆ ಹಾಜರಾಗಿತ್ತು. ಹಾಜರಾಗೋದು ಅಷ್ಟೇಯಲ್ಲ, ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನೂ ಸವಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಕೆರೂರು ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣಕ್ಕೆ ಇಂದು ರಾಷ್ಟ್ರ ಪಕ್ಷಿ ಆಗಮಿಸಿತ್ತು. ಶಾಲಾ ಆವರಣದಲ್ಲಿ ಓಡಾಡಿ ತರಗತಿಗಳಿ ಬಳಿ ಸುಳಿದಾಡಿತ್ತು. ಬಳಿಕ ಮಧ್ಯಾಹ್ನ ಅಕ್ಷರ ದಾಸೋಹ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಬಿಸಿ ಊಟವನ್ನು ಸವಿದು ಖುಷಿ ಪಟ್ಟಿತು. ಮಕ್ಕಳೊಂದಿಗೆ ಕೂಡಿ ಬಿಸಿಯೂಟ ಸವಿದ ಮಯೂರಿ, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶಾಲಾ ಆವರಣದಲ್ಲಿ ಪಂಕ್ತಿ ಸಾಲಿನಲ್ಲಿ ಕುಳಿತು ಮಕ್ಕಳ ಜೊತೆ ಬಿಸಿಯೂಟ ಸೇವಿಸುವ ಮುನ್ನ ಪ್ರಾರ್ಥನೆ ಸಲ್ಲಿಸುವಾಗ ಮಕ್ಕಳ ಬಳಿಯೇ ಓಡಾಡಿತ್ತು. ಬಳಿಕ ವಿದ್ಯಾರ್ಥಿಗಳ ತಟ್ಟೆಯತ್ತ ಸಾಗಿತ್ತು. ಆಗ ಶಿಕ್ಷಕರ ಸಲಹೆ ಮೇರೆಗೆ ಓರ್ವ ವಿಧ್ಯಾರ್ಥಿನಿ ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ತಾನು ಬೇರೊಂದು ತಟ್ಟೆ ಪಡೆದು ಊಟ ಮಾಡಿದ್ದಾಳೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ